

ಬಂಟ್ವಾಳ: ಕರ್ನಾಟಕದ ಇತ್ತೀಚಿನ ರಾಜಕೀಯ ಬೆಳವಣಿಗೆ ಅವಲೋಕಿಸಿದರೆ ಚುನಾಯಿತ ಸರ್ಕಾರವನ್ನು ಕೇಂದ್ರ ರಾಜ್ಯಪಾಲರ ಮೂಲಕ ಅಸ್ಥಿರಗಳಿಸಲು ಪ್ರಯತ್ನಿಸುತ್ತಿದೆ. ಬಿಜೆಪಿಯ ಕುಟಿಲ ರಾಜಕೀಯ ನೀತಿ ಸಾಬೀತಾಗುತ್ತಿದೆ ಎಂದು ಸಿಪಿಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್ ಹೇಳಿದರು.
ರಾಜ್ಯಪಾಲರ ಹುದ್ದೆಯನ್ನು ರದ್ದುಗೊಳಿಸಲು ಸಂವಿಧಾನಾತ್ಮಕವಾಗಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಬಂಟ್ವಾಳ ತಾಲೂಕು ಸಮಿತಿ ನೇತೃತ್ವದಲ್ಲಿ ಗುರುವಾರ ಬಿ.ಸಿ.ರೋಡಿನ ಆಡಳಿತ ಸೌಧದ ಎದುರು ಆಯೋಜಿಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
ಪ್ರತಿಭಟನೆಗೆ ಮುನ್ನ ಪಕ್ಷದ ಬಿ.ಸಿ.ರೋಡ್ ಕಚೇರಿಯಿಂದ ಮೆರವಣಿಗೆ ನಡೆಸಲಾಯಿತು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್, ಸಿಪಿಐ ತಾಲೂಕು ಸಮಿತಿ ಸದಸ್ಯ ಎಂ.ರಾಮ ಮುಗೇರ, ಉಮಾಮತಿ ಕುರ್ನಾಡು, ಶಮಿತಾ, ಸರೋಜಿನಿ ಕುರಿಯಾಳ, ಭಾರತೀಯ ಮಹಿಳಾ ಒಕ್ಕೂಟದ ನಾಯಕಿ ಕೇಶವತಿ, ರೇವತಿ ಎಸ್, ಮೋಹಿನಿ, ನಯನಾ ಕೆ, ಭೋಜ ಕರಂಬೇರ, ಎಂ.ಬಿ.ಭಾಸ್ಕರ, ಯುವಜನ ಫೆಡರೇಶನ್‌ನ ಹರ್ಷಿತ್, ಮೋಹನ ಅರಳ, ಸೀತಾರಾಮ ವಿಟ್ಲ, ಕೃಷ್ಣ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಸಿಪಿಐ ಬಂಟ್ವಾಳ ತಾಲೂಕು ಸಹಕಾರ್ಯದರ್ಶಿ ಪ್ರೇಮನಾಥ ಕೆ. ಸ್ವಾಗತಿಸಿದರು. ಭಾರತಿ ಪ್ರಶಾಂತ್ ವಂದಿಸಿದರು. ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.