

ಕಲಬುರಗಿ: ಕರೊನಾ ಸೋಂಕಿನಿಂದ ನಾಗೇನಹಳ್ಳಿ ಪೊಲೀಸ್ ತರಬೇತಿ ಕೇಂದ್ರದ ಸಿಪಿಐ ಎಸ್.ಎಂ.ಯಾಳಗಿ ಮೃತಪಟ್ಟಿದ್ದಾರೆ.
ಕೊವಿಡ್-19 ಸೋಂಕಿಗೆ ಒಳಗಾಗಿದ್ದ ಇವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ. ಇದನ್ನೂ ಓದಿ: ‘ಉದ್ಯೋಗ ಕೊಡುತ್ತೇವೆ ಎಂದು ಹೇಳಿ, ಪಕೋಡ ಮಾರುವ ಐಡಿಯಾ ಕೊಟ್ರು…’
ಈ ಮೊದಲು ಕಲಬುರಗಿಯ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಯಾಳಗಿ ಅವರು, ಜನವರಿಯಲ್ಲಿ ಪೊಲೀಸ್ ತರಬೇತಿ ಕೇಂದ್ರಕ್ಕೆ ವರ್ಗಾವಣೆಗೊಂಡಿದ್ದರು. ಯಾಳಗಿ ಅವರು ಕೊವಿಡ್-19ನಿಂದ ಮೃತಪಟ್ಟಿರುವ ಬಗ್ಗೆ ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲರು ಮಾಹಿತಿ ನೀಡಿದ್ದಾರೆ.