

ಬೆಂಗಳೂರು: ಮಹಾರಾಷ್ಟ್ರದಿಂದ ಆಗಮಿಸುವ ಪ್ರಯಾಣಿಕರ ಗಂಟಲು ದ್ರವವನ್ನು ಬೆಂಗಳೂರಿನ ರೈಲ್ವೆ ನಿಲ್ದಾಣಗಳಲ್ಲಿ ಸಂಗ್ರಹಿಸಲು ರಾಜ್ಯ ಸರ್ಕಾರ ಪ್ರಾರಂಭಿಸಿದೆ.
ಮಂಗಳವಾರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 8 ರಲ್ಲಿರುವ ನಿರೀಕ್ಷಣಾ ಕೊಠಡಿ, ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್‌ಎಂಟಿ) ಯಿಂದ ವಿಶೇಷ ರೈಲು ಬಂದ ಕೂಡಲೇ ಕರೋನವೈರಸ್ ಪರೀಕ್ಷಾ ಕೇಂದ್ರವಾಗಿ ಮಾರ್ಪಟ್ಟಿತು.
ಸರ್ಕಾರವು ತೆಗೆದುಕೊಂಡ ನಿರ್ಧಾರಕ್ಕೆ ಅನುಗುಣವಾಗಿ ಈ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಜಾವೈದ್ ಅಖ್ತರ್ ಸುದ್ಧಿ ಸಂಸ್ಥೆಗೆ ತಿಳಿಸಿದ್ದಾರೆ. ನಗರಕ್ಕೆ ವ್ಯಾಪಾರೋದ್ದೇಶಿತವಾಗಿ ಬರುವ ಪ್ರಯಾಣಿಕರ ಗಂಟಲು ದ್ರವವನ್ನು ತಜ್ಞರು ಸಂಗ್ರಹಿಸುತ್ತಾರೆ. ಆನಂತರ ಅವರನ್ನು ನೇರವಾಗಿ ಸಾಂಸ್ಥಿಕ ಕ್ವಾರಂಟೈನ್ಗೆ ಕಳಿಸಲಾಗುತ್ತದೆ. ಗಂಟಲು ದ್ರವ ಪರೀಕ್ಷಿಸಿದ ನಂತರ ಅದು ನೆಗೆಟಿವ್ ಬಂದರೆ ಮಾತ್ರ ಅವರಿಗೆ ಹೊರಹೋಗಲು ಅನುಮತಿ ನೀಡಲಾಗುತ್ತದೆ. ಪರೀಕ್ಷಿಸಿದ ಎರಡೇ ದಿನಗಳಲ್ಲಿ ಫಲಿತಾಂಶ ನೀಡಲಾಗುತ್ತದೆ” ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ನಿಗದಿತ ಮಾರ್ಗಸೂಚಿಗಳ ಪ್ರಕಾರ, ಮಹಾರಾಷ್ಟ್ರದಿಂದ ಒಳಬರುವ ಪ್ರಯಾಣಿಕರಿಗಾಗಿ ಘೋಷಿಸಲಾಗಿರುವ ಏಳು ದಿನಗಳ ಕಡ್ಡಾಯ ಕ್ವಾರಂಟೈನ್ ವ್ಯಾಪಾರ ಪ್ರಯಾಣಿಕರಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.
ಇದನ್ನೂ ಓದಿ: ಚೆನ್ನೈನಲ್ಲಿನ್ನು ಕ್ಷೌರ ಮಾಡಿಸಲು ಆಧಾರ್ ಕಡ್ಡಾಯ..!
ವಿನಾಯಿತಿ ಪಡೆಯಲು, ವ್ಯಾಪಾರ ಪ್ರಯಾಣಿಕರು COVID-19 ನೆಗೆಟಿವ್ ಪ್ರಮಾಣಪತ್ರ ಮತ್ತು ಅವರು ಬಂದ ಏಳು ದಿನಗಳಲ್ಲಿ ಹೊರಟು ಹೋಗುತ್ತಾರೆ ಎಂದು ಖಚಿತಪಡಿಸುವ ರೈಲು ಟಿಕೆಟ್‌ಗಳ ಪ್ರತಿಗಳನ್ನು ಸಲ್ಲಿಸಬೇಕಾಗುತ್ತದೆ. COVID-19 ನೆಗೆಟಿವ್ ಪ್ರಮಾಣಪತ್ರವನ್ನು ನೀಡದವರಿಗೆ ಪರೀಕ್ಷೆ ಕಡ್ಡಾಯವಾಗಿದೆ.
ನಿಗದಿತ ಮಾರ್ಗಸೂಚಿಗಳ ಅನ್ವಯ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್-ಅನುಮೋದಿತ ಲ್ಯಾಬ್‌ನಿಂದ COVID-19 ನೆಗಟಿವ್ ಪ್ರಮಾಣಪತ್ರ ಸಲ್ಲಿಸುವ ಮಹಾರಾಷ್ಟ್ರದ ಇತರ ಪ್ರಯಾಣಿಕರಿಗೂ ಸಹ (ವ್ಯಾಪಾರೇತರ) ಸಾಂಸ್ಥಿಕ ಕ್ವಾರಂಟೈನ್ ವಿನಾಯಿತಿ ನೀಡಲಾಗುವುದು. ಆದರೆ ಅವರನ್ನು ಏಳು ದಿನಗಳವರೆಗೆ ಹೋಮ್ ಕ್ವಾರಂಟೈನ್ಗೆ ಕಳುಹಿಸಲಾಗುತ್ತದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ಬೆಳಿಗ್ಗೆ 8.33 ಕ್ಕೆ 644 ಪ್ರಯಾಣಿಕರು ಉದಯನ್ ಎಕ್ಸ್‌ಪ್ರೆಸ್ (ರೈಲು 01301) ರೈಲಿನಿಂದ ಇಳಿದಿದ್ದಾರೆ. ಇದರಲ್ಲಿ 592 ವಯಸ್ಕರು ಮತ್ತು 52 ಮಕ್ಕಳು ಸೇರಿದ್ದಾರೆ.
ಸರ್ಕಾರಿ ಅಧಿಕಾರಿಗಳು ನಿಲ್ದಾಣದಲ್ಲಿ ಪ್ರಯಾಣಿಕರ ಮಾಹಿತಿ ದಾಖಲಿಸಿಕೊಂಡ ನಂತರ ಪ್ರಯಾಣಿಕರನ್ನು ಆಯ್ದ ಕ್ವಾರಂಟೈನ್ ಸ್ಥಳಕ್ಕೆ ಕರೆದೊಯ್ಯಲು 10 ಕ್ಕೂ ಹೆಚ್ಚು ಬಿಎಂಟಿಸಿ ಬಸ್ಸುಗಳು (ಉಚಿತ / ಪಾವತಿಸಿದ)
ಸಿದ್ಧವಾಗಿದ್ದವು ನೈರುತ್ಯ ರೈಲ್ವೆ ತಿಳಿಸಿದೆ.