

ಬಳ್ಳಾರಿ: ಕೋವಿಡ್ ವಾರ್ಡ್ನಲ್ಲಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಭರ್ಜರಿಯಾಗಿ ಡಾನ್ಸ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. 'ಮಸ್ತ್ ಮಸ್ತ್ ಹುಡುಗಿ ಬಂದ್ಲು ಹಾಯಿ ಹಾಯಿ ರೋ...' ಎಂದು ಆಸ್ಪತ್ರೆಯಲ್ಲೇ ಕುಣಿದು ಕುಪ್ಪಳಿಸಿದ್ದಾರೆ.
ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡೋದನ್ನು ಬಿಟ್ಟು ಡಾನ್ಸ್ ಮಾಡೋದಾ? ಎಂದು ಹುಬ್ಬೇರಿಸಬೇಡಿ. ಇದುವರೆಗೂ ಕರೊನಾ ಮಣಿಸುವ ಹೋರಾಟದಲ್ಲಿ ನಿರತವಾಗಿದ್ದ ಕೆಲ ಸಿಬ್ಬಂದಿಯೇ ಈ ಡಾನ್ಸ್ ಮಾಡಿರೋದು. ಸದ್ಯ ಅವರು ಚಿಕಿತ್ಸೆ ನೀಡೋಕೆ ಆಗಲ್ಲ. ಏಕೆಂದರೆ ಅವರಿಗೂ ಸೋಂಕು ತಗುಲಿದ್ದು, ಬಳ್ಳಾರಿ ನಗರದ ವಿಮ್ಸ್ ದಂತ ವೈದ್ಯಕೀಯ ಕಾಲೇಜಿನ ಕೋವಿಡ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋವಿಡ್ ಸೋಂಕಿತ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ನೃತ್ಯ ಮಾಡುವ ಮೂಲಕ ಮನೋಲ್ಲಾಸ ವ್ಯಕ್ತಪಡಿಸಿದ್ದಾರೆ. ಉಪೇಂದ್ರ ಚಿತ್ರದ 'ಮಸ್ತ್ ಮಸ್ತ್ ಹುಡುಗಿ ಬಂದ್ಲು...' ಹಾಗೂ
ಮಂಡ್ಯದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು 'ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ...' ಹಾಡಿಗೆ ಹೆಜ್ಜೆ ಹಾಕುತ್ತ ಕಾಲ ಕಳೆಯುತ್ತಿದ್ದ ವಿಡಿಯೋ ಇತ್ತೀಗೆ ವೈರಲ್ ಆಗಿತ್ತು.
ಇದೀಗ ಕರೊನಾ ಸಂಕಷ್ಟದ ಸಮಯದಲ್ಲೂ ಬೇಸರ ಕಳೆಯಲು ಸೋಂಕಿತರು ಡಾನ್ಸ್ ಮಾಡುತ್ತ ಕಾಲಕಳೆಯುತ್ತಿದ್ದು, ಅವರ ಆತ್ಮವಿಶ್ವಾಸಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.