

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ...
ಈ ಹಾಡು ಮಂಡ್ಯದ ಕೋವಿಡ್ ಆಸ್ಪತ್ರೆಯಲ್ಲಿ ರಿಂಗಣಿಸುತ್ತಿದೆ. ಹೌದು, ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳು 'ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ...' ಹಾಡಿಗೆ ಹೆಜ್ಜೆ ಹಾಕುತ್ತ ಕಾಲ ಕಳೆಯುತ್ತಿದ್ದಾರೆ.
ಡಾ.ರಾಜ್ಕುಮಾರ್ ಅಭಿನಯದ 'ಸತ್ಯ ಹರಿಶ್ಚಂದ್ರ' ಸಿನಿಮಾದ ಎವರ್ ಗ್ರೀನ್ ಹಾಡು 'ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ'. ಈ ಹಳೆಯ ಹಾಡು ಜನರ ಮನದಲ್ಲಿ ಹಸಿರಾಗೆ ಇದೆ. ಇದರ ತಾಳಕ್ಕೆ ಕುಣಿದವರಿಲ್ಲ. ಇದೀಗ ಕರೊನಾ ಸಂಕಷ್ಟದ ಸಮಯದಲ್ಲೂ ಬೇಸರ ಕಳೆಯಲು ಸೋಂಕಿತರು ಈ ಹಾಡಿನ ಮೊರೆ ಹೋಗಿದ್ದಾರೆ.
ಕರೊನಾ ಲಕ್ಷಣ ಇಲ್ಲದ, ಸೋಂಕು ದೃಢಪಟ್ಟಿರುವ ರೋಗಿಗಳ ವಾರ್ಡ್ನಲ್ಲಿ ಈ ಹಾಡಿಗೆ ಡಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸೋಂಕಿತರ ಆತ್ಮವಿಶ್ವಾಸಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.