ಕೋವಿಡ್ ವಾರ್ಡ್​ನಲ್ಲೇ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ... ತಕ್ಕ ಶಾಸ್ತಿ ಮಾಡಿದ ನರ್ಸ್​

nurse pic
Published on

ಆಂಧ್ರಪ್ರದೇಶ: ಕೋವಿಡ್ ವಾರ್ಡ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ನರ್ಸ್​ ಮೇಲೆ ಸೋಂಕಿತೆಯ ಮಗನೇ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಪ್ರಕಾಶಂ ಜಿಲ್ಲೆಯ ಓಂಗಲೆ ಆರ್​ಐಎಂಎಸ್​​ ಆಸ್ಪತ್ರೆಯಲ್ಲಿ ನಡೆದಿದೆ.
ಘಟನೆ ನಡೆದ ಮರುದಿನವೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಆಗಸ್ಟ್ 01 ರಂದು ಕೋವಿಡ್ ವಾರ್ಡ್​ನಲ್ಲಿ ತನ್ನ ದಿನ ನಿತ್ಯದ ಪಾಳಿ ಮುಗಿಸಿ ರಾತ್ರಿ 08 ಗಂಟೆ ವೇಳೆ ನರ್ಸ್​ ಮನೆಗೆ ತೆರಳಲು ಸಿದ್ದರಾಗಿದ್ದರು. ಈ ವೇಳೆ ಆರೋಪಿ ನರ್ಸ್ ಬಳಿ ತೆರಳಿ, ನೀನು ನನ್ನ ತಾಯಿಗೆ ಸರಿಯಾಗಿ ಮಾಸ್ಕ್ ಹಾಕಿಲ್ಲ ಎಂದು ವಾಗ್ವಾದ ನಡೆಸಿದ್ದಾನೆ.

ನಂತರ ವಾಗ್ವಾದ ಜೋರಾಗಿದ್ದು, ಆರೋಪಿ ನರ್ಸ್​ ದೇಹದ ಖಾಸಗಿ ಭಾಗಕ್ಕೆ ಹೊಡೆದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದರಿಂದ ಕುಪಿತಗೊಂಡ ನರ್ಸ್​ ಆರೋಪಿ ಕೆನ್ನೆಗೆ ಬಾರಿಸಿದ್ದಾರೆ. ನಂತರ ಜಗಳ ಜೋರಾಗಿದ್ದು, ಅಕ್ಕ-ಪಕ್ಕದ ವಾರ್ಡ್​ನವರು ಬಂದು ಸಮಾಧಾನ ಹೇಳಿದ್ದಾರೆ ಎನ್ನಲಾಗಿದೆ. ಈ ಸಂಬಂಧ ನರ್ಸ್​ ನೀಡಿರುವ ದೂರಿನ ಪ್ರಕಾರ, ಆರೋಪಿ ಮೇಲೆ ಐಪಿಸಿ ಸೆಕ್ಷನ್ 354ರ ಅಡಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net