ಕೋವಿಡ್​ ಸಾವಿಗೆ ಕಡಿವಾಣ; ನಿಯಂತ್ರಣಕ್ಕೆ ಸಿಗುತ್ತಿಲ್ಲ ಹೊಸ ಪ್ರಕರಣ; ಲಕ್ಷದ ಸನಿಹ ಸೋಂಕಿತರ ಸಂಖ್ಯೆ

covid-25
Published on

ಬೆಂಗಳೂರು: ಸತತ ಮೂರನೇ ದಿನವೂ ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 5 ಸಾವಿರದ ಗಡಿ ದಾಟಿದೆ. ಶುಕ್ರವಾರ ಸಂಜೆಯಿಂದ ಶನಿವಾರ ಸಂಜೆವರೆಗೆ ಒಟ್ಟು 5,072 ಹೊಸ ಪ್ರಕರಣಗಳು ಪತ್ತೆಯಾಗಿವೆ.

ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 90,942ಕ್ಕೆ ಏರಿದೆ. ಇದರಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 55,388 ಆಗಿದೆ. ಕೊಂಚ ಸಮಾಧಾನದ ಸಂಗತಿ ಎಂದರೆ, ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆಯಲ್ಲಿ ಕೊಂಚ ಏರಿಕೆ ಕಂಡಿದೆ.ನಿನ್ನೆ 2,037 ಜನರು ಡಿಸ್ಚಾರ್ಜ್​ ಆಗಿದ್ದರೆ, ಇಂದು ಇವರ ಪ್ರಮಾಣ 2,403 ಆಗಿದೆ.

ಸಾವಿನ ಸಂಖ್ಯೆಗೂ ಕಡಿವಾಣ ಬಿದ್ದಿದೆ. ನಿನ್ನೆ 110 ಜನರು ಮೃತಪಟ್ಟಿದ್ದರೆ, ಇಂದು ಆ ಸಂಖ್ಯೆ 72ಕ್ಕೆ ಇಳಿದಿದೆ. ಒಟ್ಟು ಸಾವಿನ ಪ್ರಮಾಣ 1,796ಕ್ಕೆ ತಲುಪಿದೆ. ಮರಣ ಪ್ರಮಾಣ ಶೇ.1.97 ಆಗಿದ್ದು, ರಾಷ್ಟ್ರಿಯ ಸರಾಸರಿಗಿಂತ ಕಡಿಮೆ ಇದೆ.

ರಾಜಧಾನಿಯಲ್ಲಿ ಇಂದಿನ ಒಟ್ಟು ಕೇಸ್​ಗಳು 2,063 ನಿನ್ನೆ ಇದು 2,267 ಆಗಿತ್ತು. ಒಟ್ಟು ಪ್ರಕರಣಗಳ ಸಂಖ್ಯೆ 43,503ಕ್ಕೆ ಮುಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 31,881 ಆಗಿದೆ. ನಿನ್ನೆಗೆ ಹೋಲಿಸಿದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದವರ ಸಂಖ್ಯೆ ಕಡಿಮೆಯಾಗಿದ್ದು ಇಂದು 686 ಜನರು ಚೇತರಿಕೆ ಕಂಡಿದ್ದಾರೆ. ನಿನ್ನೆ ಇವರ ಪ್ರಮಾಣ 746 ಇತ್ತು.

ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ಕಡಿಮೆಯಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ನಿನ್ನೆ 50 ಜನರು ಮೃತಪಟ್ಟಿದ್ದರೆ, ಇಂದು 30 ಜನ ಸಾವಿಗೀಡಾಗಿದ್ದಾರೆ. ಇದರೊಂದಿಗೆ ರಾಜಧಾನಿಯಲ್ಲಿ ಕೋವಿಡ್​ನಿಂದಾದ ಒಟ್ಟು ಸಾವಿನ ಪ್ರಮಾಣ 863ಕ್ಕೆ ತಲುಪಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net