

ಪಟನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಕರೊನಾ ಭೀತಿ ಆವರಿಸಿದೆ. ಇದೀಗ ಅವರ ನಾಲ್ವರು ಕಾರ್ಯದರ್ಶಿಗಳಲ್ಲಿ ಕರೊನಾ ಸೋಂಕು ದೃಢಪಟ್ಟಿದೆ.
ಜುಲೈ 1ರಂದು ಬಿಹಾರದ ವಿಧಾನ ಪರಿಷತ್ ಕೆಲ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇತ್ತು. ಅದರಲ್ಲಿ ಭಾಗವಹಿಸಿದ್ದ ಬಿಜೆಪಿ ಮುಖಂಡ, ವಿಧಾನ ಪರಿಷತ್ ಸದಸ್ಯ ಅವಧೇಶ್ ನಾರಾಯಣ್ ಸಿಂಗ್ ಅವರಲ್ಲಿ ನಂತರ ಕರೊನಾ ದೃಢಪಟ್ಟಿತ್ತು. ಆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಭಾಗವಹಿಸಿದ್ದರು. ಅಷ್ಟೇ ಅಲ್ಲ, ಅವಧೇಶ್ ಅವರ ಪಕ್ಕದ ಕುರ್ಚಿಯಲ್ಲಿಯೇ ಕುಳಿತಿದ್ದರು.
ಅವಧೇಶ್ ಅವರಲ್ಲಿ ಕರೊನಾ ಸೋಂಕು ಕಾಣಿಸುತ್ತಿದ್ದಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗಿತ್ತು. ಅವರಲ್ಲೀಗ ನಿತೀಶ್ ಕುಮಾರ್ ಅವರ ನಾಲ್ವರು ಕಾರ್ಯ ಸಹಾಯಕರಲ್ಲಿ ಕರೊನಾ ದೃಢಪಟ್ಟಿದೆ. (ಏಜೆನ್ಸೀಸ್)