More

    ಸಿಂಗಾಪುರದಲ್ಲಿ ಮತ್ತೆ ಕೋವಿಡ್​ ಕಾಟ!

    ಸಿಂಗಾಪುರ: ಕೋವಿಡ್​-19 ಸೋಂಕಿನ ಮತ್ತೊಂದು ಅಲೆ ಕಾಡುವ ಅಪಾಯ ತಲೆದೋರಿದ್ದು ಮುಂಬರುವ ವಾರಗಳಲ್ಲಿ ಜನರು ಅನಾರೋಗ್ಯದಿಂದ ಆಸ್ಪತ್ರೆಗಳಿಗೆ ದಾಖಲಾಗಬೇಕಾದೀತು ಎಂದು ಸಿಂಗಾಪುರ ಆರೋಗ್ಯ ಸಚಿವ ಆಂಗ್​ ಯೇ ಕುಂಗ್​ ಎಚ್ಚರಿಸಿದ್ದಾರೆ.

    ಮೂರು ವಾರಗಳ ಹಿಂದೆ ಇದ್ದ 1,000 ದೈನಿಕ ಪ್ರಕರಣಗಳು ಕಳೆದ ಎರಡು ವಾರಗಳಲ್ಲಿ 2,000ಕ್ಕೆ ಏರಿದೆ. ಆದರೆ ಸರ್ಕಾರ ಇದನ್ನು “ಎಂಡೆಮಿಕ್​ ರೋಗ’ವಾಗಿ ಪರಿಗಣಿಸುತ್ತದೆ ಎಂದು ಕುಂಗ್​ ಹೇಳಿದ್ದಾರೆ.

    ಇತ್ತೀಚಿನ ಕೋವಿಡ್​ ಉಲ್ಬಣಕ್ಕೆ ಇಜಿ.5 ಮತ್ತು ಅದರ ಉಪ-ಪ್ರಭೇದ ಎಚ್​ಕೆ.3 ಕಾರಣವೆಂದು ಹೇಳಲಾಗಿದೆ. ಇವೆರಡೂ ಎಕ್ಸ್​ಬಿಬಿ ಒಮಿಕ್ರಾನ್​ ತಳಿಯ ಪ್ರಭೇದಗಳಾಗಿವೆ. ಹಾಲಿ ದೈನಿಕ ಪ್ರಕರಣಗಳಲ್ಲಿ ಈ ಎರಡು ತಳಿಗಳ ಪಾಲು ಶೇ. 75ರಷ್ಟಿದೆ ಎಂದು ಸಿಂಗಾಪುರ ಸಚಿವರು ವಿವರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts