More

    ಪ್ಯಾಲೆಸ್ಟೈನ್​ನಿಂದ ರಾಕೆಟ್​ ದಾಳಿ; ಭಾರೀ ಬೆಲೆ ತೆರಬೇಕಾಗುತ್ತದೆ ಎಂದ ಇಸ್ರೇಲ್ ರಕ್ಷಣಾ ಸಚಿವ

    ನವದೆಹಲಿ: ಗಾಜಾ ಪಟ್ಟಿಯಲ್ಲಿರುವ ಹಮಾಸ್ ಭಯೋತ್ಪಾದಕರು ಶನಿವಾರ ಮುಂಜಾನೆ ಇಸ್ರೇಲ್ ಕಡೆಗೆ ಹತ್ತಾರು ರಾಕೆಟ್‌ಗಳನ್ನು ಹಾರಿಸಿ ಯುದ್ಧದ ಪರಿಸ್ಥಿತಿ ಸೃಷ್ಟಿಸಿದ್ದಾರೆ. ದಾಳಿ ಮಾಡುವ ಮೂಲಕ ಹಮಾಸ್​ ಗುಂಪು ದೊಡ್ಡ ತಪ್ಪನ್ನು ಮಾಡಿದೆ ಎಂದು ಇಸ್ರೇಲ್​ ತಿಳಿಸಿದೆ.

    ಈ ಕುರಿತು ಪ್ರಕಟಣೆಯನ್ನು ಹೊರಡಿಸಿರುವ ಇಸ್ರೇಲ್​ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಹಮಾಸ್ ಯುದ್ದ ಶುರು ಮಾಡುವ ಮೂಲಕ ದೊಡ್ಡ ತಪ್ಪನ್ನು ಮಾಡಿದೆ. ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.

    ಭಾರೀ ಬೆಲೆ ತೆರಬೇಕಾಗುತ್ತದೆ

    ಹಮಾಸ್​ ಇಸ್ರೇಲ್​ ವಿರುದ್ಧ ರಾಕೆಟ್​ ದಾಳಿ ಮಾಡುವ ಮೂಲಕ ದೊಡ್ಡ ತಪ್ಪೊಂದನ್ನು ಮಾಡಿದೆ. IDF ಪಡೆಗಳು ಪ್ರತಿ ಸ್ಥಳದಲ್ಲಿ ಶತ್ರುಗಳ ವಿರುದ್ಧ ಹೋರಾಡುತ್ತಿವೆ. ಭದ್ರತಾ ಸೂಚನೆಗಳನ್ನು ಅನುಸರಿಸಲು ನಾನು ಎಲ್ಲಾ ಇಸ್ರೇಲ್ ನಾಗರಿಕರಿಗೆ ಕರೆ ನೀಡುತ್ತೇನೆ. ಇಸ್ರೇಲ್ ಈ ಯುದ್ದವನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಅಪ್ರಾಪ್ತ ವಯಸ್ಕಳಿಗೆ ಲೈಂಗಿಕ ಕಿರುಕುಳ; ನಾಲ್ವರು ಪೊಲೀಸ್​ ಅಧಿಕಾರಿಗಳು ಅರೆಸ್ಟ್

    ಇಸ್ರೇಲ್​ನ 21ಕ್ಕೂ ಹೆಚ್ಚು ಸ್ಥಳಗಳಲ್ಲಿ ಪೊಲೀಸ್​ ಹಾಗೂ ಮಿಲಿಟರಿ ಪಡೆಗಳು ಕಾರ್ಯನಿರ್ವಹಿಸುತ್ತಿವೆ. ಇಸ್ರೇಲ್​ನ ದಕ್ಷಿಣ ಭಾಗವನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗಿದೆ. ಹಮಾಸ್ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಇಸ್ರೇಲ್‌ನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇದರೊಂದಿಗೆ ಹಮಾಸ್ ನ ಭಯೋತ್ಪಾದಕ ಸಂಘಟನೆ ಇದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಎಚ್ಚರಿಸಿದ್ದಾರೆ.

    ಏನಿದು ವಿವಾದ?

    ವಾಸ್ತವವಾಗಿ, ಈ ಪ್ರದೇಶದಲ್ಲಿ ಕನಿಷ್ಠ 100 ವರ್ಷಗಳಿಂದ ಈ ಸಂಘರ್ಷ ನಡೆಯುತ್ತಿದೆ. ವೆಸ್ಟ್ ಬ್ಯಾಂಕ್, ಗಾಜಾ ಸ್ಟ್ರಿಪ್​​​​​​ಮತ್ತು ಗೋಲನ್ ಹೈಟ್ಸ್‌ನಂತಹ ಪ್ರದೇಶಗಳಲ್ಲಿ ವಿವಾದವಿದೆ. ಪೂರ್ವ ಜೆರುಸಲೆಮ್ ಸೇರಿದಂತೆ ಈ ಪ್ರದೇಶಗಳನ್ನು ಪ್ಯಾಲೆಸ್ಟೈನ್ ಹಕ್ಕು ಸಾಧಿಸಿದೆ. ಅದೇ ಸಮಯದಲ್ಲಿ, ಇಸ್ರೇಲ್ ಜೆರುಸಲೆಮ್ ಮೇಲಿನ ತನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ಧವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಪ್ರತಿ ದಿನವೂ ಉದ್ವಿಗ್ನ ವಾತವರಣವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts