ರಾಜ್ಯದಲ್ಲಿ ಹೆಚ್ಚಿದ ಕೋವಿಡ್ ಮೂವರ ಸಾವು, 1,374 ಮಂದಿಗೆ ಸೋಂಕು,ಸಕ್ರಿಯ ಪ್ರಕರಣಗಳ ಸಂಖ್ಯೆ 7286ಕ್ಕೆ ಏರಿಕೆ!

Covid
Published on

ಬೆಂಗಳೂರು: ರಾಜ್ಯದಲ್ಲಿ ಶನಿವಾರ ಕೋವಿಡ್ ಸೋಂಕು ಹಾಗೂ ಸಾವಿನ ಸಂಖ್ಯೆ ಎರಡಲ್ಲೂ ಏರಿಕೆ ಕಂಡು ಬಂದಿದ್ದು, 1,374 ಮಂದಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರು ನಗರದಲ್ಲಿ ಇಬ್ಬರು ಹಾಗೂ ಬಳ್ಳಾರಿಯಲ್ಲಿ ಒಬ್ಬರು ಸೇರಿ ಮೂವರು ಸೋಂಕಿಗೆ ಬಲಿಯಾಗಿದ್ದಾರೆ.

ಸೋಂಕು ಹೆಚ್ಚಳದೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 7,286ಕ್ಕೆ ಏರಿಕೆಯಾಗಿದೆ. ಒಟ್ಟು ಮೃತರ ಸಂಖ್ಯೆ 40,088 ತಲುಪಿದ್ದು, ಈವರೆಗೂ 39.85 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲಿದ್ದಾರೆ. ಕಳೆದ 24 ಗಂಟೆಗಳಲ್ಲಿ 777 ಸೋಂಕಿತರು ಚೇತರಿಸಿಕೊಂಡಿದ್ದು, ಗುಣಮುಖರ ಒಟ್ಟು ಸಂಖ್ಯೆ 39.37 ಲಕ್ಷ ಮೀರಿದೆ.

ಬೆಂಗಳೂರು ನಗರದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ತೀವ್ರವಾಗಿದ್ದು, 1,234 ಪ್ರಕರಣಗಳು ದೃಢಪಟ್ಟಿವೆ. ಧಾರವಾಡದಲ್ಲಿ 33, ಮೈಸೂರಿನಲ್ಲಿ 22, ದಕ್ಷಿಣ ಕನ್ನಡದಲ್ಲಿ 19, ಬಳ್ಳಾರಿಯಲ್ಲಿ 12, ಕಲಬುರಗಿಯಲ್ಲಿ 9, ಹಾಸನದಲ್ಲಿ 8, ಬೆಳಗಾವಿ ಮತ್ತು ಕೋಲಾರದಲ್ಲಿ ತಲಾ 7, ಬೆಂಗಳೂರು ಗ್ರಾಮಾಂತರದಲ್ಲಿ 6, ಉಡುಪಿಯಲ್ಲಿ 5, ಬಾಗಲಕೋಟೆಯಲ್ಲಿ ಮೂವರು, ಚಿತ್ರದುರ್ಗ, ದಾವಣಗೆರೆ ಮತ್ತು ಮಂಡ್ಯದಲ್ಲಿ ತಲಾ ಇಬ್ಬರು, ಗದಗ, ಕೊಪ್ಪಳ ಮತ್ತು ತುಮಕೂರಿನಲ್ಲಿ ತಲಾ ಒಬ್ಬರಂತೆ 1,374 ಸೋಂಕು ಪ್ರಕರಣಗಳು ವರದಿಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net