More

    ಎಸಿಬಿ‌ ಮುಚ್ಚಿ ಲೋಕಾಯುಕ್ತ ಬಲವರ್ಧನೆಗೆ ಕಾಲಾವಕಾಶವಿದೆ: ಬಿಜೆಪಿ ಪ್ರಧಾನ‌ ಕಾರ್ಯದರ್ಶಿ ಎನ್.ರವಿಕುಮಾರ್

    ಬೆಂಗಳೂರು: ಕಳೆದ ಚುನಾವಣಾ‌ ಪ್ರಣಾಳಿಕೆಯಲ್ಲಿ ಜನರಿಗೆ‌ ನೀಡಿದ ಭರವಸೆ ಮರೆತಿಲ್ಲ. ಭ್ರಷ್ಟಾಚಾರ ನಿಗ್ರಹದಳ ( ಎಸಿಬಿ) ಮುಚ್ಚಿ ಲೋಕಾಯುಕ್ತ‌ ಬಲವರ್ಧಿಸಲು ಕಾಲಾವಕಾಶವಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದರು.

    ಪಕ್ಷದ ರಾಜ್ಯ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿ‌ಯಲ್ಲಿ ಮಾತನಾಡಿದ ಅವರು, ಮಹದಾಯಿ ವಿವಾದ ತ್ವರಿತ‌ ಇತ್ಯರ್ಥಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಸಲು ವಿಶೇಷ ತಂಡವನ್ನು ನಿಯೋಜಿಸಲಾಗಿದ್ದು, ಕಳಸಾ-ಬಂಡೂರಿ‌ ನಾಲಾ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ ಎಂದರು.

    ಭ್ರಷ್ಟಾಚಾರ ವಿಷಯದಲ್ಲಿ ಸರ್ಕಾರದ್ದು ಜೀರೋ ಟಾಲರೆನ್ಸ್ ನಿಲುವು. ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿದ್ದು, ಸರ್ಕಾರಿ ಕಚೇರಿಗಳಲ್ಲಿ ಫೋಟೋ ತೆಗೆಯುವ, ವಿಡಿಯೋ ಮಾಡುವುದನ್ನು ನಿಷೇಧಿಸಿದ್ದ ಸುತ್ತೋಲೆ ವಾಪಸ್ ಪಡೆದಿದೆ. ಅಷ್ಟೇ ಅಲ್ಲ, ವ್ಯಾಕರಣ ದೋಷ ಎಸಗಿದ ಸಂಬಂಧಿಸಿದ ಸಿಬ್ಬಂದಿ ವಿರುದ್ಧ ಅಧಿಕಾರಿಗಳು ಕ್ರಮವಹಿಸಲಿದ್ದಾರೆ ಎಂದರು.

    ಭೂತದ ಬಾಯಲ್ಲಿ ಭಗವದ್ಗೀತೆ: ದೀರ್ಘಾವಧಿವರೆಗೆ‌ ಒಡೆದಾಳಿದ, ಭಾರತ್ ತೋಡೋ ಮಾಡಿದ ಕಾಂಗ್ರೆಸ್ ಇದೀಗ ಭಾರತ್ ಜೋಡೋ‌ ಯಾತ್ರೆಗೆ ಮುಂದಾಗಿದೆ. ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿಸಿದಂತಿದೆ ಎಂದು ರವಿಕುಮಾರ್ ಲೇವಡಿ ಮಾಡಿದರು.

    ಮಳೆಯಿಂದ ತಪ್ಪಿಸಿಕೊಳ್ಳಲು ಸೇತುವೆ ಕೆಳಗಿನ ಹಳಿ ಮೇಲೆ ನಿಂತಿದ್ದ 40 ಕುರಿಗಳ ಮೇಲೆ ಹರಿದ ರೈಲು!

    ವಿದೇಶದಿಂದ ಐಷಾರಾಮಿ ಕಾರು ಖರೀದಿ: ಮದ್ರಾಸ್​ ಹೈಕೋರ್ಟ್​​ನಿಂದ ನಟ ವಿಜಯ್​ಗೆ ಬಿಗ್​ ರಿಲೀಫ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts