

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪಾಲ್ಗೊಳ್ಳುವ ಲೋಕಸಭಾ ಸದಸ್ಯರು ಕೋವಿಡ್ ಪರೀಕ್ಷೆಗೆ ಒಳಗೊಳ್ಳುವುದು ಕಡ್ಡಾಯವಾಗಿದೆ ಎಂದು ಸ್ಪೀಕರ್ ಓಂ ಬಿರ್ಲಾ ಆದೇಶ ಹೊರಡಿಸಿದ್ದಾರೆ.
ಕಲಾಪಕ್ಕಾಗಿ ಸಂಸತ್ ಭವನದಲ್ಲಿ ಭಾರಿ ಬದಲಾವಣೆಗಳನ್ನು ಮಾಡಲಾಗಿದೆ. ಎಲ್ಲ ಸಂದರಿಗೂ ಆರ್ಟಿ-ಪಿಸಿಆರ್ ಪರೀಕ್ಷೆ ಮಾಡಿಸಲಾಗವುದು. ಇದರ ಫಲಿತಾಂಶ ಗೊತ್ತಾಗಲು 24- 48 ಗಂಟೆ ಬೇಕಾಗಲಿದೆ ಎಂದು ಸ್ಪೀಕರ್ ಮಾಹಿತಿ ನೀಡಿದರು. ಸಂಸದರು ಮಾತ್ರವಲ್ಲದೇ, ಅಧಿವೇಶನದಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳು, ವರದಿಗಾರರು ಕೂಡ ಕೋವಿಡ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.
ಸೆ.14ರಂದು ಸಂಸತ್ ಕಲಾಪ ಆರಂಭವಾಗಲಿದ್ದು, ಅಕ್ಟೋಬರ್ 1ರವರೆಗೆ ಮುಂದುವರಿಯಲಿದೆ. ರಾಜ್ಯಸಭೆ ಹಾಗೂ ಲೋಕಸಭೆಗಳು ಪ್ರತ್ಯೇಕ ಪಾಳಿಗಳಲ್ಲಿ ಕಲಾಪ ನಡೆಸಲಿವೆ. ಲೋಕಸಭೆ ಕಲಾಪ ಬೆಳಗ್ಗೆ 9ಕ್ಕೆ ಆರಂಭವಾದರೆ, ರಾಜ್ಯಸಭೆ ಮಧ್ಯಾಹ್ನ 3 ಗಂಟೆಗೆ ಶುರುವಾಗಲಿದೆ. ಚರ್ಚೆಗೆ ಹೆಚ್ಚಿನ ಕಾಲಾವಕಾಶ ಬೇಕಾಗಿದ್ದರೆ, ವಾರಾಂತ್ಯದಲ್ಲೂ ಮುಂದುವರಿಯುವ ಸಾಧ್ಯತೆಗಳಿವೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕೋವಿಡ್ ತಪಾಸಣೆಗಾಗಿ ಲೋಕಸಭೆಯಲ್ಲಿಯೇ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ. ಈ ಅಧಿವೇಶನದಲ್ಲಿ ಒಟ್ಟು 11 ವಿಧೇಯಕಗಳು ಮಂಡನೆಯಾಗಲಿವೆ ಎಂದು ಹೇಳಲಾಗಿದೆ.