

ವಿಜಯಪುರ: ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 5,213ಕ್ಕೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಅಲ್ಲಿಗೆ ಒಟ್ಟು ಸಾವಿನ ಸಂಖ್ಯೆ 59ಕ್ಕೆ ಏರಿದೆ.
ವಿಜಯಪುರದಲ್ಲಿ 82 ವರ್ಷದ ವೃದ್ಧೆ ಕೊವಿಡ್ನಿಂದ ಮೃತಪಟ್ಟಿದ್ದಾರೆ. ಈ ಮೂಲಕ ವಿಜಯಪುರದಲ್ಲಿ ಸಾವಿನ ಸಂಖ್ಯೆ ಆರಕ್ಕೇರಿದೆ.
ವೃದ್ಧೆ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 27ರಂದೇ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಕರೊನಾ ಟೆಸ್ಟ್ಗೆ ಒಳಪಡಿಸಲಾಗಿತ್ತು. ಇಂದು ವರದಿ ಬಂದಿದ್ದು, ಅದರಲ್ಲಿ ಕೊವಿಡ್-19 ಪಾಸಿಟಿವ್ ಎಂದಿದೆ.
ನಿನ್ನೆ ಬೀದರ್ನಲ್ಲಿ 55 ವರ್ಷದ ವೃದ್ಧೆಯೋರ್ವರು ತೀವ್ರ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಕಂಟೇನ್ಮೆಂಟ್ ಝೋನ್ನ ನಿವಾಸಿಯಾಗಿದ್ದ ಅವರು ಮಧುಮೇಹ, ಉಸಿರಾಟದ ಸಮಸ್ಯೆ, ನಿಶ್ಯಕ್ತಿಯ ಸಮಸ್ಯೆಯಿಂದ ಬಳಲುತ್ತಿದ್ದರು. ಮೇ 16ರಂದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಿನ್ನೆ ಮೃತಪಟ್ಟಿದ್ದು, ಕೊವಿಡ್ ವರದಿಯ ಬಗ್ಗೆ ಉಲ್ಲೇಖವಿಲ್ಲ.