ಮಕ್ಕಳ ನಿರ್ಲಕ್ಷ್ಯಕ್ಕೆ ಮನನೊಂದ ವೃದ್ಧ ತಂದೆ-ತಾಯಿ ಜತೆಯಾಗಿ ಆತ್ಮಹತ್ಯೆ

Sucide 6 June 20
Published on

ಚಿಕ್ಕಮಗಳೂರು: ಮಕ್ಕಳ ನಿರ್ಲಕ್ಷ್ಯಕ್ಕೆ ಒಳಗಾದ ವೃದ್ಧ ದಂಪತಿ ಒಟ್ಟಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೊಸಮನೆ ಬಡಾವಣೆಯಲ್ಲಿ ನಡೆದಿದೆ.

ಗೋಪಾಲಕೃಷ್ಣ (74), ರತ್ನಾ (73) ಮೃತ ದಂಪತಿ. ಇವರಿಬ್ಬರೂ ಡೆತ್​ ನೋಟ್​ ಬರೆದಿದ್ದಾರೆ. ಗೋಪಾಲಕೃಷ್ಣ ಅವರು ನೇಣು ಹಾಕಿಕೊಂಡಿದ್ದು, ತಾಯಿ ರತ್ನಾ ಅವರು ವಿಷ ಸೇವಿಸಿ ಮೃತಪಟ್ಟಿದ್ದಾರೆ.

ಮಕ್ಕಳ ವರ್ತನೆಯಿಂದ ತೀವ್ರವಾಗಿ ನೊಂದು ಇವರಿಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net