ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ ದೃಢಪಟ್ಟಿರುವ ಕೋವಿಡ್ -19 ಕೇಸ್ಗಳ ಸಂಖ್ಯೆ 378 ಆಗಿದ್ದು ಒಟ್ಟು ಪ್ರಕರಣಗಳು 5 ಸಾವಿರದ ಗಡಿ ದಾಟಿದೆ. ಉಡುಪಿಯಲ್ಲೇ ಗರಿಷ್ಠ 121 ಪ್ರಕರಣಗಳು ದೃಢಪಟ್ಟಿದ್ದು ಜಿಲ್ಲೆಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದಿದೆ. ಯಾದಗಿರಿ ಜಿಲ್ಲೆ ಬೆಂಗಳೂರು ನಗರವನ್ನು ಹಿಂದಿಕ್ಕಿ ಮೂರನೇ ಸ್ಥಾನ ತಲುಪಿದೆ. ಇಂದು ಎರಡು ಮರಣ ಪ್ರಕರಣ ದಾಖಲಾಗಿದ್ದು, ಇಂದು ಆಸ್ಪತ್ರೆಯಿಂದ 280 ಜನ ಸೋಂಕು ಮುಕ್ತರಾಗಿ ಬಿಡುಗಡೆ ಹೊಂದಿದ್ದಾರೆ.
ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 5,213 ಆಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3,184 ಆಗಿದೆ. ಸಾವಿನ ಸಂಖ್ಯೆ 59 ತಲುಪಿದ್ದು, ಇದರಲ್ಲಿ ಎರಡು ಪ್ರಕರಣದಲ್ಲಿ ಅನ್ಯಕಾರಣಗಳಿಂದಾಗಿ ಕೋವಿಡ್ ರೋಗಿಗಳು ಮೃತಪಟ್ಟಿದ್ದಾರೆ. ಇದು ನಿನ್ನೆ ಸಂಜೆ 5ರಿಂದ ಇಂದು ಸಂಜೆ 5 ಗಂಟೆವರೆಗಿನ ಡೇಟಾ ಆಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ ಇದುವರೆಗೆ 1968 ಆಗಿದೆ. ಐಸಿಯುನಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 11.
ಜಿಲ್ಲಾವಾರು ಪಟ್ಟಿಯಲ್ಲಿ ಉಡುಪಿ, ಕಲಬುರಗಿ, ಯಾದಗಿರಿ, ಬೆಂಗಳೂರುನಗರ, ರಾಯಚೂರು ಮೊದಲ ಐದು ಸ್ಥಾನಗಳಲ್ಲಿವೆ. ಇಂದು ಉಡುಪಿಯಲ್ಲಿ 121, ಕಲಬುರಗಿ 69, ಯಾದಗಿರಿ 103, ಬೆಂಗಳೂರು ನಗರ 18, ರಾಯಚೂರು 2 ಪ್ರಕರಣ ದೃಢಪಟ್ಟಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ ಉಡುಪಿಯಲ್ಲಿ 889, ಕಲಬುರಗಿ 621, ಯಾದಗಿರಿ 476, ಬೆಂಗಳೂರು ನಗರ 452, ರಾಯಚೂರು 358 ಆಗಿದೆ. ದಕ್ಷಿಣ ಕನ್ನಡದಲ್ಲಿ ಇಂದು 24 ಕೇಸ್ಗಳು ದೃಢವಾಗಿದ್ದು, ಒಟ್ಟು ಕೇಸ್ಗಳ ಸಂಖ್ಯೆ 167. ಪೂರ್ಣ ವಿವರಗಳಿಗೆ ಕೆಳಗಿನ ಗ್ಯಾಲರಿ ಗಮನಿಸಿ..