

ಷೇರು ಮಾರುಕಟ್ಟೆ ವಂಚನೆ ಮತ್ತು ನಿಯಂತ್ರಕ ಉಲ್ಲಂಘನೆ ಆರೋಪದ ಮೇಲೆ ಮಾಜಿ ಸೆಬಿ(SEBI) ಅಧ್ಯಕ್ಷೆ ಮಾಧಭಿ ಪುರಿ ಬುಚ್ ಸೇರಿದಂತೆ ಇತರ 5 ಜನರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮುಂಬೈ ವಿಶೇಷ ನ್ಯಾಯಾಲಯವು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ನಿರ್ದೇಶನ ನೀಡಿದೆ.
"ನಿಯಂತ್ರಣ ವೈಫಲ್ಯಗಳು ಮತ್ತು ಒಪ್ಪಂದದ ಬಗ್ಗೆ ಪ್ರಾಥಮಿಕವಾಗಿ ಪುರಾವೆಗಳಿದ್ದು, ಈ ಪ್ರಕರಣದಲ್ಲಿ ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ" ಎಂದು ವಿಶೇಷ ಎಸಿಬಿ ನ್ಯಾಯಾಲಯದ ನ್ಯಾಯಾಧೀಶ ಶಶಿಕಾಂತ್ ಏಕನಾಥರಾವ್ ಬಂಗಾರ್ ಅವರಿದ್ದ ಏಕಸದಸ್ಯ ಪೀಠ ಶನಿವಾರ ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ.
ಆರೋಪಗಳು ಮೇಲ್ನೋಟಕ್ಕೆ ಅಪರಾಧ ಎಸಗಿದ್ದಾರೆ ಎಂದು ಕಾಣಿಸುತ್ತಿದ್ದು, ತನಿಖೆ ಅಗತ್ಯ ಎಂದು ನ್ಯಾಯಾಲಯದ ಆದೇಶ ಉಲ್ಲೇಖಿಸಿದೆ.
ಕಾನೂನು ಜಾರಿ ಸಂಸ್ಥೆಗಳು (ಏಜೆನ್ಸಿಗಳು) ಮತ್ತು ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿ (ಸೆಬಿ) ನಿಷ್ಕ್ರಿಯತೆಯಿಂದ ಸಿಆರ್‌ಪಿಸಿ (ಕ್ರಿಮಿನಲ್ ಪ್ರೊಸೀಜರ್ ಕೋಡ್) ನಿಬಂಧನೆಗಳ ಅಡಿಯಲ್ಲಿ ನ್ಯಾಯಾಂಗ ಹಸ್ತಕ್ಷೇಪದ ಅಗತ್ಯವಿದೆ ಹೇಳಿದೆ.
1992ರ SEBI ಕಾಯ್ದೆ ಮತ್ತು ಅದರ ಅಡಿಯಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳನ್ನು ಪಾಲಿಸದೆ, ನಿಯಂತ್ರಕ ಅಧಿಕಾರಿಗಳ, ವಿಶೇಷವಾಗಿ SEBIಯ ಸಕ್ರಿಯ ಒಪ್ಪಿಗೆಯೊಂದಿಗೆ ಸ್ಟಾಕ್ ಎಕ್ಸ್ಚೆಂಚ್ನಲ್ಲಿ ಕಂಪನಿಯೊಂದನ್ನು ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.(ಏಜೆನ್ಸಿಸ್)