More

    ಮದ್ವೆಯಾಗಿ 17 ವರ್ಷಗಳ ಬಳಿಕ ಗೊತ್ತಾಯ್ತು ಇಬ್ಬರ ನಡುವಿನ ಅಸಲಿ ಸಂಬಂಧ!

    ನವದೆಹಲಿ: ಇವರಿಬ್ಬರಿಗೆ ಮದುವೆಯಾಗಿ 17 ವರ್ಷಗಳು ಉರುಳಿವೆ. ಮಾತ್ರವಲ್ಲ, ಮೂವರು ಮಕ್ಕಳೂ ಇದ್ದಾರೆ. ಆದರೆ ಇಷ್ಟೆಲ್ಲ ಆದಮೇಲೆ ಪತ್ನಿಗೆ ಪತಿ ಜೊತೆಗೆ ಇರಬೇಕೋ ಬೇಡವೋ ಎಂಬ ಗೊಂದಲವೊಂದು ಕಾಡಿದೆ. ಅಷ್ಟಕ್ಕೂ ಈ ಗೊಂದಲ ಕಾಡಲು ಕಾರಣ ಇವರಿಬ್ಬರ ನಡುವಿನ ಅಸಲಿ ಸಂಬಂಧ!

    ಯುಎಸ್​ನ ಕೊಲೊರಡೊದಲ್ಲಿನ ಸೆಲಿನಾ ಕ್ವಿನಾನ್ಸ್​ ಮತ್ತು ಜೋಸೆಫ್ ದಂಪತಿ 2006ರಲ್ಲಿ ಮದುವೆಯಾಗಿದ್ದರು. ಇವರಿಗೆ ಮೂವರು ಮಕ್ಕಳಿದ್ದಾರೆ. ಆದರೆ ಮದುವೆಯಾಗಿ 17 ವರ್ಷಗಳ ಬಳಿಕ ಇವರಿಗೆ ತಾವು ಕಸಿನ್ಸ್ ಎಂಬುದು ಡಿಎನ್​ಎ ಪರೀಕ್ಷೆಯಿಂದಾಗಿ ಗೊತ್ತಾಗಿದೆ.

    ಇದನ್ನೂ ಓದಿ: ನಂದಿನಿ-ಅಮುಲ್ ಸಂಘರ್ಷ: ಕೆಎಂಎಫ್​ನಿಂದ ಹೊರಬಿತ್ತು ಮಹತ್ವದ ಸ್ಪಷ್ಟನೆ

    ಈ ದಂಪತಿ ತಮ್ಮ ವಂಶವೃಕ್ಷದ ಬಗ್ಗೆ ತಿಳಿಯುವ ಕುತೂಹಲದಿಂದ ಡಿಎನ್​ಎ ಪರೀಕ್ಷೆ ಮಾಡಿಸಿದ್ದರು. ಆದರೆ ಅದರಲ್ಲಿ ಆಘಾತಕಾರಿ ವಿಷಯ ಬೆಳಕಿಗೆ ಬಂದಿತ್ತು. ಇವರಿಬ್ಬರು ಈಗ ಸಂಬಂಧದಲ್ಲಿ ಕಸಿನ್ಸ್ ಆಗುತ್ತದೆ ಎಂದು ಡಿಎನ್​ಎ ಪರೀಕ್ಷೆಯಲ್ಲಿ ತಿಳಿದುಬಂದಿತ್ತು.

    ಇದನ್ನೂ ಓದಿ: Wanted | ಸುಳಿವು ನೀಡಿದ್ರೆ 5 ಲಕ್ಷ ರೂ. ಬಹುಮಾನ; ಈತ ಹಿಂದೂ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದ ಆರೋಪಿ

    ನಾನು ಈ ಪರೀಕ್ಷೆಯ ವರದಿ ನೋಡಿ ದಿಗ್ಭ್ರಾಂತಗೊಂಡಿದ್ದು, ಖಿನ್ನಳಾಗಿದ್ದೆ. ಆದರೆ ಬಳಿಕ ನನ್ನ ಪತಿ ಆ ಬೇಸರದಿಂದ ಹೊರಬರುವಂತೆ ಮಾಡಿದ್ದರು. ನಾವು ಕಸಿನ್ಸ್​ ಎಂದು ಗೊತ್ತಾದಾಗ ನಾವಿನ್ನು ಜೊತೆಗಿರಬೇಕೋ ಇಲ್ಲ ಬೇರೆಯಾಗಿ ಬಿಡಬೇಕೋ ಎಂಬ ಗೊಂದಲ ಕಾಡಿತ್ತು ಎಂದು ಸೆಲಿನಾ ತನ್ನ ಟಿಕ್​ಟಾಕ್​ ಖಾತೆಯಲ್ಲಿ ಹಂಚಿಕೊಂಡಿದ್ದಳು. ಅದಾಗ್ಯೂ ತಮ್ಮ ದಾಂಪತ್ಯ ಮುಂದುವರಿಸುವ ನಿಲುವು ತಳೆದಿರುವ ಸೆಲಿನಾ, ಐ ಲವ್ ಮೈ ಕಸಿನ್ ಎಂದೂ ಹೇಳಿಕೊಂಡಿದ್ದಾರೆ.

    ಅಪರಿಚಿತರ ಬಳಿ ಲಿಫ್ಟ್ ಕೇಳಿಯೇ ಏಕಾಂಗಿಯಾಗಿ ಇಡೀ ರಾಜ್ಯ ಸುತ್ತಲಾರಂಭಿಸಿದ್ದಾಳೆ ಈ ಯುವತಿ: ಉದ್ದೇಶವಾದರೂ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts