ಮಾಟ-ಮಂತ್ರದ ಆರೋಪದ ಮೇಲೆ ದಂಪತಿಯನ್ನು ಮರಕ್ಕೆ ಕಟ್ಟಿ ಚಿತ್ರಹಿಂಸೆ

black magic sangareddy
Published on

ಸಂಗಾರೆಡ್ಡಿ: ಮಾಟ ಮಂತ್ರವನ್ನು ನಡೆಸುತ್ತಿದ್ದಾರೆ ಎಂದು ದಂಪತಿಗಳಿಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿಯಲ್ಲಿ ನಡೆದಿದೆ.

ಇದನ್ನೂ ಓದಿ: ದೇಹ ಮಣ್ಣಾಗುವಷ್ಟರಲ್ಲಿ ಶವ ಪೆಟ್ಟಿಗೆ ಒಳಗಿಂದ ಕೇಳಿ ಬಂತು ಶಬ್ದ; ಅಲ್ಲಿದ್ದವರಿಗೆ ಅಚ್ಚರಿ!

ಸದಾಶಿವಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕೋಲ್ಕೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಯಾದಯ್ಯ ಹಾಗೂ ಆತನ ಹೆಂಡತಿ ಶ್ಯಾಮಮ್ಮ ಮಾಟ ಮಂತ್ರವನ್ನು ನಡೆಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಇವರಿಬ್ಬರ ಮನೆಗೆ ನುಗ್ಗಿ ಅವರನ್ನು ಬೇರೆಡೆ ಎಳೆದೊಯ್ದು, ಕೊನೆಗೆ ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಈ ಕುರಿತಾದ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಕೂಡಲೇ ಗ್ರಾಮಕ್ಕೆ ತೆರಳಿ ದಂಪತಿಗಳ ರಕ್ಷಣೆ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಪೊಲೀಸ್​ ಅಧಿಕಾರಿ, ಎರಡು ದಿನಗಳ ಹಿಂದೆ ಮಾಟಮಂತ್ರ ಮಾಡಿದ ಆರೋಪದ ಮೇಲೆ ಕೆಲವು ಗ್ರಾಮಸ್ಥರು ದಂಪತಿಯನ್ನು ಮರಕ್ಕೆ ಕಟ್ಟಿಹಾಕಿದ್ದಾರೆ. ಆದರೆ ಸಂತ್ರಸ್ತರಿಗೆ ಗಂಭೀರ ಗಾಯಗಳಾಗಿಲ್ಲ ಮತ್ತು ಘಟನೆಯ ನಂತರ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net