ಮದುವೆಯಲ್ಲೇ ಬೆಂಕಿ ಹಚ್ಚಿಕೊಂಡು ಓಡಿದ ನವ ವಧು-ವರ! ಆಮೇಲಾಗಿದ್ದೇನು? ಶಾಕಿಂಗ್​ ಇಲ್ಲಿದೆ

Bride Fire
Published on

ನ್ಯೂಯಾರ್ಕ್​: ಪ್ರತಿಯೊಬ್ಬರ ಬಾಳಲ್ಲೂ ಮದುವೆ ಹೀಗೆ ನಡೆಯಬೇಕೆಂಬ ಕನಸು ಇದ್ದೇ ಇರುತ್ತದೆ. ಜೀವನದ ಪ್ರಮುಖ ಘಟ್ಟಗಳಲ್ಲೊಂದಾದ ಮದುವೆಯನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕೆಂದು ಕೆಲವರು ವಿಶೇಷವಾಗಿ ಏನೋ ಮಾಡಲು ಹೋಗುತ್ತಾರೆ.

ಶಾಸ್ತ್ರ ಸಂಪ್ರದಾಯಗಳ ಜತೆಯಲ್ಲಿ ತಮಗಿಷ್ಟ ಎಂದು ಕೆಲವರು ನೀರಿನ ಮೇಲೆ ಮದುವೆಯಾಗುವುದು, ಇನ್ನೂ ಕೆಲವರು ವಿಮಾನದಲ್ಲಿ ಹಾರಾಡುತ್ತಲೇ ಮದುವೆಯಾಗುತ್ತಾರೆ. ಅದೇ ರೀತಿ ಇಲ್ಲೊಂದು ಜೋಡಿ ತಮ್ಮ ಮದುವೆಯನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಲು ಮಾಡಿದ ಯೋಜನೆಗೆ ನೀವು ನಿಜಕ್ಕೂ ಬೆಚ್ಚಿ ಬೀಳುತ್ತೀರಾ.

ಮದುವೆಯ ಆರಕ್ಷತೆ ಇನ್ನೇನೂ ಪ್ರಾರಂಭವಾಗಬೇಕಿತ್ತು. ನವ ವಧು ವರರ ಆಗಮನದ ನಿರೀಕ್ಷೆಯಲ್ಲಿದ್ದವರಿಗೆ ಅಲ್ಲಿ ಶಾಕ್​ ಕಾದಿತ್ತು. ಅದೇನೆಂದರೆ ಇಬ್ಬರೂ ಬೆನ್ನಿಗೆ ಬೆಂಕಿ ಹಚ್ಚಿ ಓಡಿಬರುತ್ತಿದ್ದರು. ಇದು ಕೆಲವರಿಗೆ ಅರ್ಥವಾಗಲಿಲ್ಲ. ಇಲ್ಲೇನು ಆಗುತ್ತಿದೆ ಎಂದು ಗೊಂದಲದಲ್ಲಿದ್ದರೆ, ಮತ್ತೆ ಕೆಲವರು ಇದು ವಧು-ವರರೇ ಮಾಡಿರುವ ಪ್ಲಾನ್ ಎಂದು ಗೊತ್ತಾಗಿ ನಿಟ್ಟುಸಿರುಬಿಟ್ಟಿದ್ದಾರೆ.

ಈ ಜೋಡಿ ಹೀಗೇಕೆ ಮಾಡಿದೆ ಎಂಬುದಕ್ಕೆ ಅವರೇ ಉತ್ತರಿಸಿದ್ದಾರೆ. ಹಾಲಿವುಡ್​ ಸಿನಿಮಾಗಳಲ್ಲಿ ಸ್ಟಂಟ್​ ಮಾಡುವ ಇವರಿಬ್ಬರು ತಮ್ಮ ಮದುವೆಯೂ ವಿಭಿನ್ನವಾಗಿರಬೇಕೆಂದು ಇಬ್ಬರು ಸೇರಿ ಮೊದಲೇ ಈ ಯೋಜನೆ ಹಾಕಿಕೊಂಡಿದ್ದರಂತೆ. ಸ್ವಲ್ಪ ಎಚ್ಚರ ತಪ್ಪಿದ್ದರೂ ಪ್ರಾಣಕ್ಕೆ ತೊಂದರೆಯಾಗುತ್ತಿತ್ತು. ಅದೃಷ್ಟವಶಾತ್​ ಸಮಯಕ್ಕೆ ಸರಿಯಾಗಿ ಬೆಂಕಿ ನಂದಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net