ಮಂಗಳೂರಿನಲ್ಲಿ ಓಡಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ನೋಡಿ ಭಯಭೀತರಾದ ಜನರು..! ಇದೆಲ್ಲ ಕರೊನಾ ವೈರಸ್​ ಪರಿಣಾಮ

Coronavirus 16 march 20
Published on

ಮಂಗಳೂರು: ಮೊದಲೆಲ್ಲ ವಿದೇಶಿಗರನ್ನು ಕುತೂಹಲದಿಂದ ನೋಡಲಾಗುತ್ತಿತ್ತು. ಆದರೆ ಈಗ ಭಯದಿಂದ ನೋಡುವಂತಾಗಿದೆ. ಅದಕ್ಕೆ ಕಾರಣ ಮಾತ್ರ ಖಂಡಿತವಾಗಿಯೂ ಕರೊನಾ ವೈರಸ್​..!

ಸದ್ಯಕ್ಕಂತೂ ವಿದೇಶಿಗರ ಮೇಲೆ ತೀವ್ರ ನಿಗಾ ಇಡಲಾಗಿದೆ. ಹೀಗಿರುವಾಗ ಮಂಗಳೂರಿನಲ್ಲಿ ನೈಜೀರಿಯಾ ಪ್ರಜೆಯೋರ್ವ ಕಾಣಿಸಿಕೊಂಡು ಆತಂಕ ಮೂಡಿಸಿದ್ದಾನೆ.

ಮಂಗಳೂರು ನವಭಾರತ್​ ಸರ್ಕಲ್​ನಲ್ಲಿ ತಿರುಗಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ನೋಡಿದ ಸ್ಥಳೀಯರು ಭಯದಿಂದ ಕೂಡಲೇ ಪೊಲೀಸರಿಗೆ ಹಾಗೂ ಆಂಬುಲೆನ್ಸ್​ಗೆ ಕರೆ ಮಾಡಿದ್ದಾರೆ. ಬಳಿಕ ಆ ನೈಜೀರಿಯಾ ಪ್ರಜೆಯನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net