ಲಾಕ್​ಡೌನ್​​ ಲೆಕ್ಕಿಸದೇ ಸಾಮೂಹಿಕ ನಮಾಜ್​: ಗಡಿಯಲ್ಲಿ ಆತಂಕದ ವಾತಾವರಣ

Namaz
Published on

ಬೀದರ್​: ಕರೊನ್ ಸೋಂಕು ಹರಡದಂತೆ ಸರ್ಕಾರ ಸಂಪೂರ್ಣ ಭಾರತವನ್ನು ಲಾಕ್​ಡೌನ್ ಮಾಡಿದೆ. ಸಾಮಾಜಿಕ ಅಂತರ ಕಾಪಾಡಲು ಆದೇಶಿಸಿದೆ. ಆದರೂ ಜಿಲ್ಲೆಯಲ್ಲಿ ಅಲ್ಲಲ್ಲಿ ಮುಸ್ಲಿಂರು ಉದ್ಧಟತನ ಪ್ರದರ್ಶಿಸುತ್ತಾ ಸಾಮೂಹಿಕ ನಮಾಜ್ ಮಾಡುವ ಮೂಲಕ ಸರ್ಕಾರದ ಆದೇಶ ಧಿಕ್ಕರಿಸುತ್ತಿದ್ದಾರೆ.

ಮಹಾರಾಷ್ಟ್ರ ಗಡಿಯಲ್ಲಿ ಇರುವ ಕಮಲನಗರ ಪಟ್ಟಣದಲ್ಲಿ 24 ಜನರಿಂದ ಸಾಮೂಹಿಕ ನಮಾಜ್ ನಡೆದಿದೆ. ಲಾಕ್​ಡೌನ್ ಆದೇಶಕ್ಕೆ ಬೆಲೆ ನೀಡದೆ ನಮಾಜ್ ಮಾಡಿದ 24 ಜನರ ವಿರುದ್ಧ ಸದ್ಯ ಪ್ರಕರಣ ದಾಖಲಾಗಿದೆ.

ಕಮಲನಗರ ಪಟ್ಟಣದ ಖುರೇಷಿ ಬಡಾವಣೆಯ ಸದರ್ ಪಾಶಾಮಿಯ್ಯಾ ಎಂಬುವವರ ಹೊಸ ಕಟ್ಟಡದಲ್ಲಿ 25 ಕ್ಕೂ ಅಧಿಕ ಜನರು ಸೇರಿ ಒಂದೇ ಸ್ಥಳದಲ್ಲಿ ನಮಾಜ್ ಮಾಡುತ್ತಿದ್ದರು. ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಹೋಗಿದಾಗ ಸಿಕ್ಕಿಬಿದ್ದಿದ್ದಾರೆ.

ಕಟ್ಟಡದ ಮಾಲೀಕ ಸೇರಿ 24 ಜನರ ವಿರುದ್ಧ ಕಮಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಬ್ಲಿಘಿ ಜಮಾತ್​ ಕರೊನಾ ವೈರಸ್​ ಹಾಟ್​ಸ್ಪಾಟ್​ ಎಂದು ತಿಳಿದಿದ್ದರೂ ಇನ್ನೂ ಎಚ್ಚೆತ್ತುಕೊಳ್ಳದಿರುವುದು ವಿಷಾದಕರ ಸಂಗತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net