ಕರ್ನಾಟಕದಲ್ಲಿ ಗಂಟೆಗಂಟೆಗೂ ಹೆಚ್ಚುತ್ತಿದೆ ವೈರಸ್‌: 9 ಗಂಟೆಯಲ್ಲಿ ಐವರು ಸೋಂಕಿತರು

Corona
Published on

ಬೆಂಗಳೂರು: ಕರ್ನಾಟಕದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಗಂಟೆ ಗಂಟೆಗೂ ಹೆಚ್ಚುತ್ತಲೇ ಇದೆ. ಇಂದು ಬೆಳಗ್ಗೆ 8 ಗಂಟೆಯವರೆಗೆ 146 ಇದ್ದ ಸಂಖ್ಯೆ ಸಂಜೆ 5 ಗಂಟೆಯ ವೇಳೆಗೆ 151ಕ್ಕೆ ಏರಿದೆ.

ಕರೊನಾ ಸೋಂಕಿನಿಂದ ಇಲ್ಲಿಯವರೆಗೆ ನಾಲ್ವರು ಮೃತಪಟ್ಟಿದ್ದರೆ, 12 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಸೋಂಕಿತರ ಸಂಖ್ಯೆ ನಿನ್ನೆ ಸಂಜೆ 5 ಗಂಟೆಯ ವೇಳೆಗೆ 144 ಇತ್ತು.

ಓರ್ವ ಗರ್ಭಿಣಿ ಸೇರಿದಂತೆ 132 ಮಂದಿಯನ್ನು ಪ್ರತ್ಯೇಕ ವಾರ್ಡ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಸರ್ಕಾರ ಹೇಳಿದೆ. ಮೂವರನ್ನು ಐಸಿಯುನಲ್ಲಿ ಇರಿಸಲಾಗಿದೆ.

ಬೆಂಗಳೂರಿನಲ್ಲಿ ಇಲ್ಲಿಯವರೆಗಿನ ಸೋಂಕಿತರ ಸಂಖ್ಯೆ 57 ಇದ್ದರೆ, ಮೈಸೂರಿನಲ್ಲಿ 28, ದಕ್ಷಿಣ ಕನ್ನಡದಲ್ಲಿ 12, ಉತ್ತರ ಕನ್ನಡ ಜಿಲ್ಲೆಯಲ್ಲಿ 8, ಬೀದರ್‌ನಲ್ಲಿ 10, ಬೆಳಗಾವಿ ಮತ್ತು ಚಿಕ್ಕಬಳ್ಳಾಪುರ ತಲಾ 7, ಕಲಬುರ್ಗಿ 5, ಬಳ್ಳಾರಿ 6, ದಾವಣಗೆರೆ, ಉಡುಪಿಯಲ್ಲಿ ತಲಾ 3, ಧಾರವಾಡ, ಕೊಡಗು, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ತುಮಕೂರಿನಲ್ಲಿ ತಲಾ 1, ಸೋಂಕಿತರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net