VIDEO| ಲೋ ಕರೊನಾ ಯಾಕಿಂಗ್​ ಮಾಡ್ಬಿಟ್ಟೆ ಜೀವನ, ಸದ್ಯದಲ್ಲೇ ಮಾಡ್ತೀವಿ ತಿಥಿನಾ: ಚಂದನ್ ಹಾಡಿಗೆ ನಿವಿ ಸಖತ್ ಸ್ಟೆಪ್ಸ್​

Chandan Shetty
Published on

ಬೆಂಗಳೂರು: ಕರೊನಾ ವೈರಸ್​ ಕುರಿತು ತಮ್ಮದೇ ಸ್ಟೈಲ್​ನಲ್ಲಿ ಸಾಂಗ್ ಕಂಪೋಸ್ ಮಾಡಿ ಸ್ಟಾರ್ ದಂಪತಿ ಚಂದನ್ ಶೆಟ್ಟಿ ಮತ್ತು‌ ನಿವೇದಿತಾ ಗೌಡ ಜಾಗೃತಿ ಮೂಡಿಸಿದ್ದಾರೆ.

ಕರೋನಾದಿಂದ ಉಂಟಾಗಿರುವ ಪರಿಸ್ಥಿತಿಯನ್ನು ಹಾಸ್ಯತ್ಮಕ ರೀತಿಯಲ್ಲಿ ಚಂದನ್​ ಶೆಟ್ಟಿ ಹಾಡಿದ್ದಾರೆ. ಎಣ್ಣೆ ಸಪ್ಲೈ ಮಾಡ್ಬೋದೇನೋ ಕುಡುಕ್ರು ಸ್ವಲ್ಪ ತಡ್ಕಳಿ ಎಂಬ ಸಾಲಿನಿಂದ ಆರಂಭವಾಗುವ ಹಾಡಿಗೆ ನಿವೇದಿತಾ ಸಖತ್​ ಸ್ಟೆಪ್ಸ್​ ಹಾಕಿದ್ದಾರೆ. ಸದ್ಯ ಚಂದನ್- ನಿವೇದಿತಾ ಅವರ ಕರೊನಾ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚೆಗಷ್ಟೇ ಕರೊನಾ ವೈರಸ್​ ಭೀತಿಯಿಂದಾಗಿ ಚಂದನ್ ಶೆಟ್ಟಿ​ ಮತ್ತು ನಿವೇದಿತಾ ಹನಿಮೂನ್​ ಅರ್ಧಕ್ಕೆ ಮೊಟಕುಗೊಳಿಸಿ ತವರಿಗೆ ಮರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net