More

    PHOTOS| ರೈಲಲ್ಲೂ ಸಿದ್ಧವಾಗಿದೆ ಕರೊನಾ ಐಸೋಲೇಷನ್ ವಾರ್ಡ್!

    ಮುಂಬೈ: ಕರೊನಾ ಸೋಂಕು ಪೀಡಿತರನ್ನು ಒಂಟಿಯಾಗಿರಿಸಿ ಚಿಕಿತ್ಸೆ ನೀಡುವ ಸಲುವಾಗಿ ರೈಲ್ವೆ ಬೋಗಿಗಳನ್ನೇ ಐಸೋಲೇಷನ್ ಯೂನಿಟ್ಸ್ ಆಗಿ ಪರಿವರ್ತಿಸುವ ಪ್ರಸ್ತಾವನೆಯನ್ನು ಭಾರತೀಯ ರೈಲ್ವೆ ಇತ್ತೀಚೆಗೆ ಒಪ್ಪಿಕೊಂಡಿತ್ತು. ಪ್ರೋಟೋ ಟೈಪ್​ ಅನ್ನು ಕೂಡಲೇ ಮಾಡುವುದಾಗಿ ತಿಳಿದ ರೈಲ್ವೆ ಶನಿವಾರ ಅದನ್ನು ಅನಾವರಣಗೊಳಿಸಿದೆ.

    ಹವಾನಿಯಂತ್ರಿತವಲ್ಲದ ಬೋಗಿಗಳನ್ನು ತುರ್ತು ಉಪಯೋಗಕ್ಕಾಗಿ ಐಸೋಲೇಷನ್ ಘಟಕಗಳನ್ನಾಗಿ ಪರಿವರ್ತಿಸಿದ ಪ್ರೋಟೋ ಟೈಪ್​ ಅನ್ನು ನಾರ್ದರ್ನ್ ರೈಲ್ವೆ ಶನಿವಾರ ಬಹಿರಂಗಗೊಳಿಸಿದೆ. ಪ್ರತಿ ರೈಲ್ವೆ ವಲಯದಲ್ಲೂ 10 ಬೋಗಿಗಳನ್ನು ಈ ರೀತಿ ಸಿದ್ಧಪಡಿಸಿಕೊಡಲಾಗುತ್ತದೆ ಎಂದು ರೈಲ್ವೆ ಸ್ಪಷ್ಟಪಡಿಸಿದೆ.

    ಐಸೋಲೇಷನ್ ವಾರ್ಡ್ ತಯಾರಿಸುವ ಸಲುವಾಗಿ ಬೋಗಿಗಳ ಮಿಡ್ಲ್ ಬರ್ತ್​ಗಳನ್ನು ತೆಗೆದಿದೆ. ಲೋವರ್ ಬರ್ತ್ ಪೋರ್ಷನ್ ಅನ್ನು ಪ್ಲೈವುಡ್​ನಿಂದ ಮರು ವಿನ್ಯಾಸಗೊಳಿಸಿ ಬೆಡ್​ನಂತೆ ಮಾಡಲಾಗಿದೆ. ಪ್ರತಿ ಕಂಪಾರ್ಟ್​ಮೆಂಟ್​ನಲ್ಲೂ ಇದೇ ವ್ಯವಸ್ಥೆ ಇದ್ದು, 220 ವೋಲ್ಟ್​ ವಿದ್ಯುತ್ ಪಾಯಿಂಟ್​ಗಳನ್ನೂ ಒದಗಿಸಲಾಗಿದೆ. ಇವುಗಳನ್ನು ಮೆಡಿಕಲ್ ಉಪಕರಣ ಬಳಸಲು ಉಪಯೋಗಿಸಬಹುದಾಗಿದೆ.

    ಬೋಗಿಯ ಪ್ರತಿಯೊಂದು ಕ್ಯಾಬಿನ್​ ಅನ್ನೂ ಪ್ರತ್ಯೇಕಿಸಲು ಪ್ಲೈವುಡ್ ಮತ್ತು ಪ್ಲಾಸ್ಟಿಕ್ ಕರ್ಟನ್​ ಅನ್ನು ಅಳವಡಿಸಲಾಗಿದೆ. ಬಾಟಲ್​ ಹೋಲ್ಡರ್​ಗಳು, ಕೋಟ್ ಹ್ಯಾಂಗರ್​ಗಳನ್ನು ಅಳವಡಿಸಿದ್ದು, ಮೆಡಿಕಲ್ ಉಪಕರಣಗಳ ಅಳವಡಿಕೆಗೆ ಸುಲಭವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಪ್ರತಿಯೊಂದು ಕಂಪಾರ್ಟ್​ಮೆಂಟ್​ನಲ್ಲೂ ಡಾಕ್ಟರ್ ಮತ್ತು ನರ್ಸ್​ಗಳ ಕ್ಯಾಬಿನ್ ಇದ್ದು ಅವರಿಗೆ ಫೋಲ್ಡಿಂಗ್ ಟೇಬಲ್ ಸೌಲಭ್ಯ ಒದಗಿಸಲಾಗಿದೆ.

    ಎಲ್ಲ ಬೋಗಿಗಳಲ್ಲೂ ಮಾಡಿಫೈ ಮಾಡಿದ ಒಂದು ಇಂಡಿಯನ್ ಸ್ಟೈಲ್ ಟಾಯ್ಲೆಟ್ ಮತ್ತು ಬಾತ್​ ರೂಮ್ ವಿನ್ಯಾಸಗೊಳಿಸಲಾಗಿದೆ. ಪೈಪ್​ಗಳನ್ನು ಬಳಸುವುದಕ್ಕೆ ಸುಲಭವಾಗುವಂತೆ ಮತ್ತೆ ಫಿಟ್ ಮಾಡಲಾಗಿದೆ. ಬಕೆಟ್​ನಲ್ಲಿ ನೀರು ತುಂಬಿ ಸ್ನಾನ ಮಾಡುವ ಸೌಲಭ್ಯವಷ್ಟೇ ಇದರಲ್ಲಿ ಇರಲಿದೆ.

    ಭಾರತೀಯ ರೈಲ್ವೆಯ 13,523 ರೈಲುಗಳು ನಿತ್ಯವೂ ಸಂಚರಿಸುತ್ತವೆ. ಏಪ್ರಿಲ್​ 14ರ ತನಕ ಲಾಕ್​ಡೌನ್ ಆಗಿರುವ ಕಾರಣ ಇವುಗಳ ಸಂಚಾರ ಸ್ಥಗಿತಗೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಡೇಟಾ ಪ್ರಕಾರ, ಭಾರತದಲ್ಲಿ 1,000 ಜನರಿಗೆ 0.7 ಬೆಡ್ ಮಾತ್ರವೇ ಇದೆ. ಪ್ರಸ್ತುತ ಇದನ್ನು ಎರಡಕ್ಕೆ ಏರಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡ ಪ್ರಕಾರ, ದೇಶದಲ್ಲಿ 1,000 ಜನರಿಗೆ 3 ಬೆಡ್ ಇರಬೇಕಾಗುತ್ತದೆ. (ಏಜೆನ್ಸೀಸ್)

    ರೈಲ್ವೆ ಬೋಗಿಗಳಾಗುತ್ತಿವೆ ಕರೊನಾ ಐಸೋಲೇಷನ್ ಯೂನಿಟ್ಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts