

ನವದೆಹಲಿ: ಸಮಯಕ್ಕೆ ತಕ್ಕಂತೆ ಸೂಕ್ತ ನಿರ್ಬಂಧ ಹೇರುವ ಮೂಲಕ ಭಾರತ ಕರೊನಾ ಹರಡುವುದನ್ನು ತಡೆಯಲು ಸಾಧ್ಯವಾಗಿದೆ, ಆದರೆ ಜುಲೈ ಕೊನೆಯ ವೇಳೆಗೆ ದೇಶದಲ್ಲಿ ಸೋಂಕು ಪ್ರಕರಣಗಳು ಗರಿಷ್ಠ ಮಟ್ಟಕ್ಕೆ ತಲುಪುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್- 19 ವಿಶೇಷ ರಾಯಭಾರಿ ಡೇವಿಡ್ ನಬರೋ ಎಚ್ಚರಿಸಿದ್ದಾರೆ.
ವೈರಸ್ ಪ್ರಕರಣಗಳು ಜಾಗತಿಕ ಮಟ್ಟದಲ್ಲಿ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ತುಲನಾತ್ಮಕವಾಗಿ ತುಸು ಕಡಿಮೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮುಂದಾಗಬಹುದಾಪಂಜಾಬ್ ಬಳಿ ಭಾರತೀಯ ವಾಯುಪಡೆ ಯುದ್ಧವಿಮಾನ ಪತನದ ಅಪಾಯ ಅರಿತು ಕ್ಷಿಪ್ರ ಲಾಕ್ಡೌನ್ ಕಾರ್ಯಗತಗೊಳಿಸಿರುವುದು ಸೂಕ್ತವಾಗಿದೆ, ಆದರೆ, ಲಾಕ್ಡೌನ್ ತೆರವುಗೊಳಿಸಿದ ನಂತರ ನಿಜವಾದ ಸವಾಲು ಎದುರಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ದೇಶದಲ್ಲಿ ಜುಲೈ ಅಂತ್ಯದ ವೇಳೆಗೆ ಕೋವಿಡ್ ಪ್ರಕರಣಗಳು ಹೆಚ್ಚಿನ ಮಟ್ಟ ತಲುಪಲಿದೆ ಎಂದ ಅವರು ಲಾಕ್ಡೌನ್ ತೆರವುಗೊಳಿಸಿದಾಗ ಹೆಚ್ಚಿನ ಪ್ರಕರಣಗಳು ಕಂಡುಬರಬಹುದಾದರೂ ಭಾರತ ಸ್ಥಿರತೆ ಹಾಗೂ ನಿಯಂತ್ರಣದಲ್ಲಿರಲಿದೆ ಎಂದರು.
ರಾಷ್ಟ್ರವ್ಯಾಪಿ ಕ್ಷಿಪ್ರ ಲಾಕ್ಡೌನ್ ಘೋಷಿಸಿದ್ದರಿಂದ ಭಾರತದಲ್ಲಿ ಈ ರೋಗ ನಿರ್ದಿಷ್ಟ ಪ್ರದೇಶಗಳಿಗೆ ಸೀಮಿತವಾಗಲು ಸಾಧ್ಯವಾಗಿದೆ. ದೆಹಲಿ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡಿನ ಕೆಲ ಪ್ರದೇಶಗಳಲ್ಲಿ ಹೆಚ್ಚು ಸೋಂಕು ಪ್ರಕರಣಗಳು ಕಾಣಿಸಿಕೊಂಡಿವೆ. ಭಾರತದಲ್ಲಿ ಕರೊನಾ ವೈರಸ್ ಪ್ರಕರಣಗಳ ಸಂಖ್ಯೆ ದೊಡ್ಡದಾಗಿದ್ದರೂ ಭಾರತದ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ ಅದೇನೂ ಅಷ್ಟು ದೊಡ್ಡ ಸಂಖ್ಯೆಯಲ್ಲ ಎಂದರು. (ಏಜನ್ಸೀಸ್).