ನಿಮಗೆ ಜನ ಸೇವೆ ಸಲ್ಲಿಸುವ ಆಸಕ್ತಿ ಇದೆಯೆ? ಇಲ್ಲಿದೆ ಉತ್ತಮ ಅವಕಾಶ

1
Published on

ಬೆಂಗಳೂರು : ಜನಸೇವೆ ಸಲ್ಲಿಸುವ ಆಸಕ್ತಿಯನ್ನು ವೃತ್ತಿಯಾಗಿಸಿಕೊಳ್ಳಬಯಸುವ ಯುವಜನತೆಗೆ ಕರ್ನಾಟಕ ಪೊಲೀಸ್ ಇಲಾಖೆ ಉತ್ತಮ ಅವಕಾಶ ಒದಗಿಸಿದೆ.
ಪೊಲೀಸ್ ಕಾನ್​​ಸ್ಟೆಬಲ್ (ನಾಗರಿಕ) ಪುರುಷ ಹಾಗೂ ಮಹಿಳಾ 2565 ಹುದ್ದೆಗಳು ಹಾಗೂ ಸಶಸ್ತ್ರ ಪೊಲೀಸ್ ಕಾನ್​​ಸ್ಟೆಬಲ್ (ಸಿಎಆರ್/ಡಿಎಆರ್) ಪುರುಷ 1449 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
4014 ಹುದ್ದೆಗಳಲ್ಲಿ 1002 ಹುದ್ದೆಗಳು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ (ಹೈ- ಕ ) ಸಂಬಂಧಿಸಿರುತ್ತವೆ.
ಮೇ 20 ರಿಂದ ಜೂನ್ 22 ರ ವರೆಗೆ ಆನ್​ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.www.ksp.gov.in ಗೆ ಲಾಗ್ ಆನ್ ಆಗಿ ಅರ್ಜಿ ಸಲ್ಲಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net