28 ದಿನ ಒಂದೂ ಸೋಂಕು ಕಾಣಿಸದಿದ್ದರೆ ಮಾತ್ರ ಅಂಥ ಸ್ಥಳ ಕರೊನಾಮುಕ್ತ!

Coronavirus Feb 20-10
Published on

ನವದೆಹಲಿ: ಯಾವುದೇ ಒಂದು ನಿರ್ದಿಷ್ಟ ಸ್ಥಳದಲ್ಲಿ ಕನಿಷ್ಠ 28 ದಿನಗಳ ಕಾಲ ಒಂದೂ ಕರೊನಾ ಸೋಂಕು ಪ್ರಕರಣ ಮರುಕಳಿಸದಿದ್ದರೆ ಮಾತ್ರ ಆ ಸ್ಥಳವನ್ನು ಕರೊನಾಮುಕ್ತ ಪ್ರದೇಶ ಎಂಬುದಾಗಿ ಘೋಷಿಸಲು ಸಾಧ್ಯ....! ಇಲ್ಲದಿದ್ದರೆ ಆ ಸ್ಥಳವನ್ನು ಇನ್ನೂ ‘ಕರೊನಾ ಸರಪಳಿ ಮುರಿಯದ ಅಪಾಯಕಾರಿ ಪ್ರದೇಶ’ ಎಂದೇ ಹೇಳಬೇಕಾಗುತ್ತದೆ.

ಇಂಥದೊಂದು ಸ್ಪಷ್ಟನೆಯನ್ನು ಸ್ವತಃ ಕೇಂದ್ರ ಆರೋಗ್ಯ ಸಚಿವಾಲಯವೇ ಮಂಗಳವಾರ ನೀಡಿದೆ. ನಲವತ್ತು ದಿನಗಳ ಲಾಕ್‌ಡೌನ್‌ನ ಔಚಿತ್ಯ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿವಾಲಯದ ಜಂಟಿ ಕಾರ‌್ಯದರ್ಶಿ ಲವ ಅಗರವಾಲ್, ಈ ವಿವರಣೆಯನ್ನು ನೀಡಿದ್ದಾರೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕರೊನಾದಿಂದ ಮತ್ತೆ 31 ಜನ ಮೃತಪಟ್ಟಿದ್ದು, ಮೃತರ ಸಂಖ್ಯೆ 339ಕ್ಕೆ ಏರಿದೆ. ಒಟ್ಟು ಸೋಂಕಿತರ ಸಂಖ್ಯೆ 10363ಕ್ಕೆ ಏರಿದೆ. ಒಂದು ದಿನದಲ್ಲಿ ಹೊಸದಾಗಿ ಸೇರ್ಪಡೆಯಾದವರ ಸಂಖ್ಯೆ 1211. ಯುವ ಪೀಳಿಗೆಯವರಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಳ್ಳುತ್ತಿದ್ದರೂ ಸಾವಿಗೀಡಾಗುತ್ತಿರುವವರಲ್ಲಿ ವಯಸ್ಸಾದವರ ಸಂಖ್ಯೆಯೇ ಜಾಸ್ತಿ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net