ಲಾಕ್​ಡೌನ್​ನಲ್ಲಿ ಸಿಕ್ಕಿಕೊಂಡು ಕಾರಿನಲ್ಲೇ 21 ದಿನ ಕಳೆದ ಪುತ್ತೂರಿನ ಯುವಕರು

car new 1
Published on

ಪುತ್ತೂರು: ದೇಶದಲ್ಲಿ ಲಾಕ್‌ಡೌನ್ ಆಗುವ ಎರಡು ದಿನ ಮೊದಲು ಗುಜರಾತಿನ ರಾಜ್‌ಕೋಟಿನಿಂದ ಹೊರಟ ಪುತ್ತೂರಿನ ಅಡಕೆ ವ್ಯಾಪಾರಿಗಳಿಬ್ಬರು ಗುಜರಾತ್‌ನ ವಲ್ಸಾಡ್ ಜಿಲ್ಲೆಯ ಅಂಬರ್‌ಗಾವ್ ಭಿಲಾಡ್ ಚೆಕ್‌ಪೋಸ್ಟ್ ಬಳಿ ಬಾಕಿಯಾಗಿದ್ದಾರೆ.

ಲಾಕ್‌ಡೌನ್ ಘೋಷಣೆಯಾಗುವ ಮೊದಲು ರಾಜ್‌ಕೋಟ್‌ನಿಂದ ತಮ್ಮ ಕಾರಿನಲ್ಲಿ ಪುತ್ತೂರು ಕಡೆ ಪ್ರಯಾಣ ಬೆಳೆಸಿದ್ದು ಸದ್ಯ ಸಂಚಾರ ಬಂದ್ ಆಗಿರುವುದರಿಂದ ಕಾರಿನಲ್ಲೇ 21 ದಿನ ಕಳೆದಿದ್ದಾರೆ. ಪುತ್ತೂರು ತಾಲೂಕು ಸಾಮೆತ್ತಡ್ಕ ನಿವಾಸಿ ಆಶಿಕ್ ಹುಸೈನ್ ಹಾಗೂ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ ಮೊಹಮ್ಮದ್ ತಾಕೀನ್ ಮರೀಲ್ 500 ಕಿ.ಮೀ ಪ್ರಮಾಣಿಸಿದ ನಂತರ ಗುಜರಾತ್- ಮಹಾರಾಷ್ಟ್ರ ಗಡಿಭಾಗ ಭಿಲಾಡ್ ಚೆಕ್‌ಪೋಸ್ಟ್ ಸಮೀಪ ಆಗಮಿಸಿದಾಗ ಲಾಕ್‌ಡೌನ್ ಘೋಷಣೆಯಾಗಿದ್ದು, ಪೊಲೀಸರು ಇವರನ್ನು ತಡೆದಿದ್ದಾರೆ.

ಚೆಕ್‌ಪೋಸ್ಟ್‌ನ ಸ್ವಲ್ಪ ದೂರದಲ್ಲಿ ಕಾರು ನಿಲ್ಲಿಸಿರುವ ಇವರಿಗೆ ಸ್ನಾನ, ಶೌಚಗೃಹಕ್ಕೆ ಸಮೀಪದ ಹೋಟೆಲ್‌ನಲ್ಲಿ ಸ್ಥಳೀಯರು ವ್ಯವಸ್ಥೆ ಮಾಡಿದ್ದಾರೆ. ಭಿಲಾಡ್‌ನ ಸಮಾಜ ಸೇವಕ ಸಯ್ಯದ್ ಕಶ್ಯಪ್ ಆಹಾರ, ತುರ್ತು ಅಗತ್ಯ ಔಷಧ ನೀಡುತ್ತಿದ್ದಾರೆ ಎಂದು ಆಶಿಕ್ ಹುಸೈನ್ ವಿಜಯವಾಣಿಗೆ ತಿಳಿಸಿದ್ದಾರೆ.

ಲಾಕ್‌ಡೌನ್ ಹಿನ್ನಲೆಯಲ್ಲಿ ನಾನು ಹಾಗೂ ಮೊಹಮ್ಮದ್ ತಾಕೀನ್ ಗುಜರಾತಿನ ಅಂಬರ್‌ಗಾವ್ ಭಿಲಾಡ್ ಚೆಕ್‌ಪೋಸ್ಟ್ ಬಳಿ ಸಿಲುಕಿದ್ದೇವೆ. ನಮ್ಮನ್ನು ಕರೆತರುವಂತೆ ಕರ್ನಾಟಕ ಸರ್ಕಾರಕ್ಕೆ ನನ್ನ ಕುಟುಂಬ ಸದಸ್ಯರು ಮನವಿ ಮಾಡಿದ್ದಾರೆ. ಪ್ರತಿಕ್ರಿಯೆ ದೊರಕಿದೆ. ಊರಿಗೆ ಯಾವಾಗ ತಲುಪುತ್ತೇವೆಯೋ ಗೊತ್ತಿಲ್ಲ. ಆಶಿಕ್ ಹುಸೈನ್ ಪುತ್ತೂರು ತಾಲೂಕು ಸಾಮೆತ್ತಡ್ಕ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net