ಕರೊನಾ ವೈರಸ್​ ಎಫೆಕ್ಟ್​: ಮಾರಣಾಂತಿಕ ಕಾಯಿಲೆಗೆ ತುತ್ತಾಗಿರುವ ಹಾಗೂ 50 ವರ್ಷ ಮೀರಿದ ಸರ್ಕಾರಿ ನೌಕರರು ರಜೆ ಪಡೆಯಬಹುದು ಎಂದು ಆದೇಶಿಸಿದ ಸರ್ಕಾರ

governamet 23 mar 20
Published on

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಾರಣಾಂತಿಕ ಕಾಯಿಲೆಗೆ ತುತ್ತಾಗಿರುವ ಹಾಗೂ 50 ವರ್ಷ ಮೀರಿದ ಸರ್ಕಾರಿ ನೌಕರರು ಇಚ್ಛಿಸಿದಲ್ಲಿ ರಜೆ ಪಡೆಯಬಹುದು ಎಂದು ಶಿಷ್ಠಾಚಾರ ಮತ್ತು ಆಡಳಿತ ಸುಧಾರಣಾ ಇಲಾಖೆ ಸೂಚಿಸಿದೆ.

ಮಧುಮೇಹ, ಉಸಿರಾಟದ ತೊಂದರೆ, ಮೂತ್ರ ಪಿಂಡ ರೋಗ ಸೇರಿದಂತೆ ಇತರೆ ಮಾರಣಾಂತಿಕ ರೋಗಗಳಿಂದ ಬಳಲುತ್ತಿರುವ ಸರ್ಕಾರಿ ಅಧಿಕಾರಿಗಳು ಸುರಕ್ಷಿತ ವಲಯದಲ್ಲಿ ಇರಲು ನಿರ್ಧರಿಸಿದರೆ ಏ.4ರವರೆಗೆ ಯಾವುದೇ ವೈದ್ಯಕೀಯ ಪ್ರಮಾಣ ಪತ್ರ ಹಾಜರುಪಡಿಸದೆ ರಜೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net