ನಿಮಿಷಕ್ಕೆ 27 ಲಕ್ಷ ಜನರ ನೋಂದಣಿ; ಕರೊನಾ ಲಸಿಕೆ ನೋಂದಣಿಗೆ ಮುಗಿಬಿದ್ದ ಜನ

vacc
Published on

ನವದೆಹಲಿ: ಮೇ 1ರಿಂದ 18 ವರ್ಷರಿಂದ 44 ವರ್ಷ ವಯಸ್ಸಿನವರಿಗೆ ಕರೊನಾ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಅದರ ನೋಂದಣಿ ಪ್ರಕ್ರಿಯೆಯನ್ನು ಇಂದಿನಿಂದ ಆರಂಭಿಸಲಾಗಿದೆ. ಮೊದಲನೇ ದಿನವೇ ಹೆಚ್ಚಿನ ಪ್ರಮಾಣದಲ್ಲಿ ನೋಂದಣಿಯಾಗಿದ್ದು, ಸರ್ವರ್​ ಕೂಡ ಡೌನ್​ ಆದ ಘಟನೆ ನಡೆದಿದೆ.

ಬುಧವಾರ ಸಂಜೆ 4 ಗಂಟೆಯಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಪ್ರತಿ ನಿಮಿಷಕ್ಕೆ 27 ಲಕ್ಷ ಜನರು ಲಸಿಕೆ ಪಡೆಯುವುದಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಭಾರೀ ಪ್ರಮಾಣದಲ್ಲಿ ನೋಂದಣಿ ಆಗಿದ್ದರಿಂದಾಗಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಕೋವಿನ್​ ಆ್ಯಪ್​ ಮತ್ತು ಆರೋಗ್ಯ ಸೇತು ಆ್ಯಪ್​ ಸರ್ವರ್​ ಡೌನ್ ಆಗಿದ್ದಾಗಿ ಅನೇಕರು ದೂರಿದ್ದಾರೆ. ಅನೇಕರಿಗೆ ಒಟಿಪಿ ಬಂದಿಲ್ಲ ಎನ್ನುವ ದೂರೂ ಕೇಳಿಬಂದಿದೆ. ಕೆಲ ಸಮಯದ ಬಳಿಕೆ ಸರ್ವರ್​ ಸರಿಯಾಗಿದ್ದಾಗಿ ತಿಳಿಸಲಾಗಿದೆ.

ಸರ್ವರ್​ ಸರಿಯಾಗಿರುವ ಬಗ್ಗೆ ಆರೋಗ್ಯ ಸೇತು ಅಧಿಕೃತ ಟ್ವಿಟ್ಟರ್​ ಹ್ಯಾಂಡಲ್​ನಲ್ಲೂ ಟ್ವೀಟ್ ಮಾಡಿ ಮಾಹಿತಿ ನೀಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net