ನವದೆಹಲಿ: ದೇಶದಲ್ಲಿ ಕರೊನಾ ನಿತ್ಯ ಸೋಂಕಿನ ಸಂಖ್ಯೆ ಮತ್ತು ಪಾಸಿಟಿವಿಟಿ ದರ ಇಳಿಮುಖವಾಗಿದೆ. ಇಂದು ಸತತ 18ನೇ ದಿನ ಸೋಂಕಿನಿಂದ ಗುಣಮುಖರಾದವರ ಸಂಖ್ಯೆಯು ಹೊಸ ಸೋಂಕಿತರ ಸಂಖ್ಯೆಯನ್ನು ಮೀರಿಸಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 2,38,022 ಜನರು ಗುಣಮುಖರಾಗಿದ್ದರೆ, 1,52,734 ಹೊಸ ಪ್ರಕರಣಗಳು ವರದಿಯಾಗಿವೆ.
ಭಾನುವಾರದಂದು 1,65,553 ಹೊಸ ಪ್ರಕರಣಗಳು ದಾಖಲಾಗಿದ್ದು, ಇದು ಕಳೆದ 46 ದಿನಗಳಲ್ಲಿ ಕಂಡುಬಂದ ಅತಿಕಡಿಮೆ ನಿತ್ಯಪ್ರಕರಣ ಸಂಖ್ಯೆಯಾಗಿದೆ. ಕರೊನಾ ಸಾವುಗಳ ಸಂಖ್ಯೆ ಇನ್ನೂ ಕಳವಳಕ್ಕೆ ಕಾರಣವಾಗಿದೆ. ಆದಾಗ್ಯೂ ಮೇ 3 ರ ನಂತರದ ಮೂರು ವಾರಗಳಲ್ಲಿ ಅತ್ಯಂತ ಕಡಿಮೆ ಮಟ್ಟಕ್ಕೆ – 3,460 ಕ್ಕೆ – ನಿತ್ಯಸಾವುಗಳ ಸಂಖ್ಯೆ ಇಳಿದಿದೆ.
ಇಂದು ಬೆಳಿಗ್ಗೆ 8 ಗಂಟೆಗೆ ಅಪ್ಡೇಟ್ ಮಾಡಲಾದ ಸರ್ಕಾರಿ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ 1,52,734 ಹೊಸ ಪ್ರಕರಣಗಳು ವರದಿಯಾಗಿದ್ದು, ಹಾಲಿ ಒಟ್ಟು 20,26,092 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ, 2,38,022 ಜನರು ಕರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೆ, 3,128 ಜನ ಸಾವಪ್ಪಿದ್ದಾರೆ. (ಏಜೆನ್ಸೀಸ್)
VIDEO | ಕರೊನಾ ರೋಗಿ ಶವವನ್ನು ಸೇತುವೆ ಮೇಲಿಂದ ನದಿಗೆ ಬಿಸಾಡಿದ ಕುಟುಂಬಸ್ಥರು !