ಮೆಗಾಸ್ಟಾರ್ ಚಿರಂಜೀವಿಗೆ ಕರೊನಾ ಪಾಸಿಟಿವ್​

ಗಿನ್ನಿಸ್ ದಾಖಲೆ ಸೇರಿತು ಮೆಗಾಸ್ಟಾರ್​ ಚಿರಂಜೀವಿ ಡ್ಯಾನ್ಸ್​
ಚಿರಂಜೀವಿ
Published on

ಬೆಂಗಳೂರು: ಮೆಗಾಸ್ಟಾರ್ ಚಿರಂಜೀವಿಗೆ ಕರೊನಾ ಸೋಂಕು ದೃಢಪಟ್ಟಿದೆ.

''ಆಚಾರ್ಯ'' ಸಿನಿಮಾ ಚಿತ್ರೀಕರಣಕ್ಕೂ ಮುನ್ನ ಕರೊನಾ ಪರೀಕ್ಷೆಗೆ ಚಿರಂಜೀವಿ ಒಳಗಾಗಿದ್ದರು. ಪ್ರೋಟೋಕಾಲ್ ನಂತೆ ಚಿತ್ರತಂಡ ಕರೊನಾ ಟೆಸ್ಟ್ ಮಾಡಿಸಿತ್ತು. ವರಿದಿಯಲ್ಲಿ ಚಿರುಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆಚಾರ್ಯ ಸಿನಿಮಾ ಶೂಟಿಂಗ್​ ಅನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.

ತಮಗೆ ಕರೊನಾ ಸೋಂಕು ಇರುವ ಬಗ್ಗೆ ಸ್ವತಃ ಚಿರಂಜೀವಿ ಅವರೇ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. '5 ದಿನಗಳಿಂದ ಯಾರೆಲ್ಲ ನನ್ನ ಸಂಪರ್ಕಕ್ಕೆ ಬಂದಿದ್ದೀರೋ ದಯವಿಟ್ಟು ಅವರೆಲ್ಲರೂ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ. ಆರೋಗ್ಯದತ್ತ ಜಾಗ್ರತೆ ವಹಿಸಿ' ಎಂದು ಮನವಿ ಮಾಡಿದ್ದಾರೆ. ಸದ್ಯ ಚಿರಂಜೀವಿ ಹೋಮ್ ಕ್ವಾರೆಂಟೈನ್​ನಲ್ಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net