ರಾಜ್ಯಕ್ಕೆ ವೀಕೆಂಡ್​​ ಲಾಕ್​ಡೌನ್ ಶಾಕ್​​! ಏನಿರತ್ತೆ? ಏನಿರಲ್ಲ? ಇಲ್ಲಿದೆ ಸಂಪೂರ್ಣ ಮಾಹಿತಿ

lo
Published on

ಬೆಂಗಳೂರು: ರಾಜ್ಯದಲ್ಲಿ ಲಾಕ್​ಡೌನ್​ ಮಾಡಲಾಗುತ್ತದೆಯೇ ಎನ್ನುವ ಪ್ರಶ್ನೆಗೆ ಅಂತೂ ತೆರೆ ಬಿದ್ದಿದೆ. ರಾಜ್ಯಾದ್ಯಂತ ಸಂಪೂರ್ಣವಾಗಿ ಲಾಕ್​ಡೌನ್​ ಮಾಡದೆಯೇ ವೀಕೆಂಡ್​ ಲಾಕ್​ಡೌನ್​ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಅದರ ಜತೆಗೆ ಮುಂದಿನ 14 ದಿನಗಳಿಗೆ ಕಠಿಣ ಕ್ರಮಗಳ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

ಸರ್ಕಾರದ ಮಾರ್ಗಸೂಚಿಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:

* ರಾಜ್ಯದ ಪ್ರತಿ ಜಿಲ್ಲೆಯಲ್ಲಿ ರಾತ್ರಿ 9ರಿಂದ ಬೆಳಗ್ಗೆ 6ವರೆಗೆ (ಏಪ್ರಿಲ್​ 21ರಿಂದ ಮೇ 4ರವರೆಗೆ) ನೈಟ್​ ಕರ್ಫ್ಯೂ ಜಾರಿಯಲ್ಲಿರಲಿದೆ.

* ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಲಾಕ್​ಡೌನ್​ ಜಾರಿಯಲ್ಲಿರಲಿದೆ.

* ಶಾಲೆ, ಕಾಲೇಜುಗಳು ಸಂಪೂರ್ಣವಾಗಿ ಬಂದ್​. ಆನ್​ಲೈನ್​ ತರಗತಿಗೆ ಮಾತ್ರವೇ ಅವಕಾಶ

* ಸಿನಿಮಾ ಹಾಲ್​ಗಳು, ಶಾಪಿಂಗ್​ ಮಾಲ್​ಗಳು, ಜಿಮ್​, ಯೋಗಾ ಸೆಂಟರ್​, ಸ್ವಿಮ್ಮಿಂಗ್​ ಪೂಲ್​, ಸ್ಪೋರ್ಟ್ಸ್​ ಕಾಂಪ್ಲೆಕ್ಸ್​, ಸ್ಪಾ, ಬಾರ್​, ಆಡಿಟೋರಿಯಂನಂತಹ ಸ್ಥಳಗಳು ಮುಚ್ಚಲಾಗುವುದು

* ಸ್ವಿಮ್ಮಿಂಗ್​ ಫೆಡರೇಷನ್​ ಆಫ್​ ಇಂಡಿಯಾದಿಂದ ಅನುಮತಿ ಪಡೆದ ಸ್ವಿಮ್ಮಿಂಗ್​ ಫೂಲ್​ಗಳನ್ನು ಮಾತ್ರ ತೆರೆಯಲು ಅನುಮತಿ

* ಸಾರ್ವಜನಿಕ, ರಾಜಕೀಯ ಸೇರಿ ಎಲ್ಲ ಕಾರ್ಯಕ್ರಮಗಳಿಗೆ ನಿರ್ಬಂಧ

* ದೇವಸ್ಥಾನ ಸೇರಿ ಎಲ್ಲ ಧಾರ್ಮಿಕ ಸ್ಥಳಗಳನ್ನು ಮುಚ್ಚಲಾಗುವುದು

* ಹೋಟೆಲ್​ ಮತ್ತು ರೆಸ್ಟೋರೆಂಟ್​ಗಳಲ್ಲಿ ಪಾರ್ಸೆಲ್​ ಮಾತ್ರಕ್ಕೆ ಅವಕಾಶ

* ಕಟ್ಟಡ ನಿರ್ಮಾಣ ಕಾಮಗಾರಿಗೆ ಅನುಮತಿ

* ಕಾರ್ಖಾನೆಗಳಲ್ಲಿ ಕೆಲಸ ನಡೆಸಲು ಅನುಮತಿ

* ಆಹಾರ ಸಂಬಂಧಿ ಅಂಗಡಿಗಳು, ದಿನಸಿ ಅಂಗಡಿ, ಹಣ್ಣು ತರಕಾರಿ ಅಂಗಡಿ, ಡೇರಿ, ಮಿಲ್ಕ್​ ಬೂತ್​, ಮೀನು * ಮಾಂಸದ ಅಂಗಡಿ ತೆರೆಯಲು ಅನುಮತಿ

* ಲಾಡ್ಜ್​ಗಳನ್ನು ತೆರೆದಿಡಲು ಅನುಮತಿ

* ಬಾರ್​, ಎಂಆರ್​ಪಿಗಳಲ್ಲಿ ಪಾರ್ಸಲ್​ ನೀಡಲು ಮಾತ್ರ ಅವಕಾಶ

* ಬ್ಯಾಂಕ್​, ಇನ್ಶೂರೆನ್ಸ್​ ಸಂಸ್ಥೆ, ಮಾಧ್ಯಮಕ್ಕೆ ಅನುಮತಿ

* ಇ ಕಾಮರ್ಸ್​ ವೇದಿಕೆಯಲ್ಲಿ ಡೆಲಿವರಿ ಮಾಡಲು ಅನುಮತಿ

* ಐಟಿ ಸಂಸ್ಥೆಗಳ ಅಗತ್ಯ ಸಿಬ್ಬಂದಿ ಹೊರೆತುಪಡಿಸಿ ಬೇರೆಲ್ಲ ಸಿಬ್ಬಂದಿಗೆ ವರ್ಕ್​ ಫ್ರಂ ಹೋಂ

* ಖಾಸಗಿ ಸಂಸ್ಥೆಗಳಲ್ಲಿ ಕಡಿಮೆ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅವಕಾಶ

* ಸರ್ಕಾರಿ ಕಚೇರಿಗಳಲ್ಲಿ ಶೇ. 50 ಸಿಬ್ಬಂದಿ ಕೆಲಸಕ್ಕೆ ಅನುಮತಿ

* ಜಿಲ್ಲೆಗಳ ನಡುವೆ ಮತ್ತು ರಾಜ್ಯಗಳ ನಡುವೆ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ

* ಮೆಟ್ರೋ, ಕೆಎಸ್​ಆರ್​ಟಿಸಿ, ಬಿಎಂಟಿಸಿ ಸೇರಿ ಎಲ್ಲ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಅನುಮತಿ

* ಮದುವೆಗಳಲ್ಲಿ ಕೇವಲ 50 ಜನರಿಗೆ ಅವಕಾಶ

* ಅಂತ್ಯಕ್ರಿಯೆಗಳಲ್ಲಿ ಕೇವಲ 20 ಜನರಿಗೆ ಅವಕಾಶ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net