ದೇಶದಲ್ಲಿ 44 ಲಕ್ಷ ಡೋಸೇಜ್​ ಕರೊನಾ ಲಸಿಕೆ ವ್ಯರ್ಥ! ಆರ್​ಟಿಐನಲ್ಲಿ ಬಯಲಾಯ್ತು ವರದಿ

vaccine
Published on

ನವದೆಹಲಿ: ದೇಶದಲ್ಲಿ ಕರೊನಾ ಸೋಂಕು ದಿನದಿಂದ ದಿನಕ್ಕೆ ವೇಗವಾಗಿ ಹರಡುತ್ತಿದೆ. ಇನ್ನೊಂದತ್ತ ಜನತೆಗೆ ಲಸಿಕೆ ನೀಡುವಲ್ಲಿ ವೈದ್ಯಕೀಯ ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ. ಈವರೆಗೆ ದೇಶಾದ್ಯಂತ ಒಟ್ಟು 44 ಲಕ್ಷ ಡೋಸೇಜ್​ ಕರೊನಾ ಲಸಿಕೆ ವ್ಯರ್ಥವಾಗಿದೆ ಎನ್ನುವುದು ಇದೀಗ ಬೆಳಕಿಗೆ ಬಂದಿದೆ.

ಲಸಿಕೆಯ ವಾಯಲ್​ ಒಂದರಲ್ಲಿ 10ರಿಂದ 12 ಡೋಸೇಜ್​ ಲಸಿಕೆ ಇರುತ್ತದೆ. ಅನೇಕರು ಲಸಿಕೆ ಪಡೆಯುವುದಕ್ಕೆ ನೋಂದಣಿ ಮಾಡಿಕೊಂಡಿರುತ್ತಾರಾದರೂ ಲಸಿಕೆ ಪಡೆಯಲು ಬರುವುದೇ ಇಲ್ಲ. ವಾಯಲ್​ ತೆರೆದ ನಂತರ ಅದರ ಲಸಿಕೆಯನ್ನು ನಿಗದಿತ ಸಮಯದೊಳಗೆ ಕೊಟ್ಟುಬಿಡಬೇಕು. ಇಲ್ಲವಾದಲ್ಲಿ ಅದು ವ್ಯರ್ಥವಾಗುತ್ತದೆ. ಅದೇ ಕಾರಣದಿಂದಾಗಿ ಲಸಿಕೆ ವೇಸ್ಟ್​ ಆಗುತ್ತಿರುವುದಾಗಿ ತಿಳಿಸಲಾಗಿದೆ.

ಲಸಿಕೆ ವೇಸ್ಟ್​ ಮಾಡಿರುವ ರಾಜ್ಯಗಳಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದೆ. ಅಲ್ಲಿ ಸುಮಾರು ಶೇ. 12.10 ಲಸಿಕೆ ವ್ಯರ್ಥವಾಗಿದೆ. ಉಳಿದಂತೆ ಹರಿಯಾಣದಲ್ಲಿ ಶೇ. 9.74, ಪಂಜಾಬ್​ನಲ್ಲಿ ಶೇ. 8.12, ಮಣಿಪುರದಲ್ಲಿ ಶೇ. 7.8 ಹಾಗೂ ತೆಲಂಗಾಣದಲ್ಲಿ ಶೇ. 7.55 ಲಸಿಕೆ ವ್ಯರ್ಥವಾಗಿದೆ ಎನ್ನುವುದು ವರದಿಯಿಂದ ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net