ಲಾಕ್​ಡೌನ್​ ತೆರವಾದ ನಂತರ ಬಿಡುಗಡೆಯಾಗಲಿರುವ ಮೊದಲ ಚಿತ್ರ ಇದೇ ...

RGV - Corona - Final
Published on

ಮುಂಬೈ: ಕೇಂದ್ರ ಸರ್ಕಾರವು ಅನ್​ಲಾಕ್​-5 ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಅಕ್ಟೋಬರ್​ 15ರಿಂದ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನವನ್ನು ಪ್ರಾರಂಭಿಸಬಹುದು ಎಂದು ಹೇಳಿದೆ.

ಚಿತ್ರಪ್ರದರ್ಶನ ಆರಂಭಿಸಬಹುದು ಎಂದು ಸರ್ಕಾರವೇ ಹೇಳಿದ್ದು, ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಕಳೆದ ಏಳು ತಿಂಗಳಿಂದ ಚಿತ್ರಮಂದಿರಗಳಲ್ಲಿ ಚಿತ್ರಗಳನ್ನು ನೋಡದಿರುವವರು, ಇದರ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನು ಚಿತ್ರರಂಗದ ವಲಯದಲ್ಲಿ, ಯಾವ ಚಿತ್ರ ಬಿಡುಗಡೆಯಾದರೆ ಪ್ರೇಕ್ಷಕರು ಚಿತ್ರಮಂದಿರಗಳತ್ತ ಬರುತ್ತಾರೆ ಎಂಬ ಲೆಕ್ಕಾಚಾರ ನಡೆದಿದೆ.

ಹೀಗಿರುವಾಗಲೇ, ರಾಮ್​ಗೋಪಾಲ್​ ವರ್ಮಾ ಅವರು, ಚಿತ್ರಪ್ರದರ್ಶನ ಪ್ರಾರಂಭವಾಗುತ್ತಿದ್ದಂತೆಯೇ, 'ಕರೊನಾ' ಎಂಬ ಹೊಸ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ. ಇದು ಲಾಕ್​ಡೌನ್​ ನಂತರ ಬಿಡುಗಡೆಯಾಗುವುದಾಗಿ ಘೋಷಿಸಿದ ಮೊದಲ ಚಿತ್ರವಾಗಲಿದೆ ಎನ್ನುವುದು ವಿಶೇಷ.

'ಕರೊನಾ' ಚಿತ್ರವನ್ನು ರಾಮ್​ಗೋಪಾಲ್​ ವರ್ಮಾ ಅವರು ಲಾಕ್​ಡೌನ್​ ಸಮಯದಲ್ಲಿ ಚಿತ್ರೀಕರಣ ಮಾಡಿದ್ದರು. ಕರೊನಾ ಸಂದರ್ಭದಲ್ಲಿ ಒಂದು ಮನೆಯಲ್ಲಿ ನಡೆಯುವ ಕೆಲವು ಘಟನೆಗಳನ್ನು ಅವರು ಹಿಡಿದಿಟ್ಟಿದ್ದರು. ಲಾಕ್​ಡೌನ್​ ಸಮಯದಲ್ಲಿ ನಿರ್ದೇಶಿಸಿದ ಬೇರೆ ಚಿತ್ರಗಳನ್ನು ವರ್ಮಾ ಅವರು ಓಟಿಟಿ ಮೂಲಕ ಬಿಡುಗಡೆ ಮಾಡಿದ್ದರು.

ಆದರೆ, 'ಕರೊನಾ' ಚಿತ್ರವನ್ನು ಮಾತ್ರ ಅವರು ಬಿಡುಗಡೆ ಮಾಡಿಲ್ಲ. ಈಗ ಲಾಕ್​ಡೌನ್​ ತೆರವಾಗುತ್ತಿದ್ದಂತೆಯೇ, ಮೊದಲು ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ. ಈಗಾಗಲೇ ಸೋಷಿಯಲ್​ ಮೀಡಿಯಾದಲ್ಲಿ, ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದಾಗಿ ಅವರು ಘೋಷಣೆ ಮಾಡಿದ್ದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net