

ಬೆಂಗಳೂರು: ನಟಿ ಪ್ರಣೀತಾ ಸುಭಾಷ್ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವುದು ಗೊತ್ತೇ ಇದೆ. ಕೆಲವು ವರ್ಷಗಳಿಂದ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಳ್ಳುವುದರ ಜತೆಗೆ, ಹಲವು ವಿಷಯಗಳ ಬಗ್ಗೆ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ.
ಇದೀಗ ಅವರು ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿನ ಕುರಿತು ಮಾತನಾಡಿದ್ದಾರೆ. ಬುಧವಾರವಷ್ಟೇ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಹೊರಬಿದ್ದಿದೆ. ಈ ಪ್ರಕರಣದ 32 ಆರೋಪಿಗಳನ್ನು ನ್ಯಾಯಾಲಯವು ಖುಲಾಸೆ ಮಾಡಿದೆ. ಈ ತೀರ್ಪಿನ ವಿಚಾರವಾಗಿ ಪರ-ವಿರೋಧದ ಚರ್ಚೆ ನಡೆಯುತ್ತಿದ್ದು, ಪ್ರಣೀತಾ ಸುಭಾಷ್ ಸಹ ತಮ್ಮ ಧ್ವನಿಗೂಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಕರಸೇವಕರ ಮೇಲೆ ಪೊಲೀಸ್ ತಂಡ ಗುಂಡು ಹಾರಿಸಿದಾಗ ನ್ಯಾಯ ಎಲ್ಲಿತ್ತು. ರಾಜಕೀಯ ನಾಯಕರನ್ನು ಬಂಧಿಸಿದಾಗ ಕಾನೂನಿನ ನಿಯಮ ಎಲ್ಲಿತ್ತು? ಕ್ಷಮಿಸಿ ಆದರೆ ಮರೆಯಬೇಡಿ' ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಚಂದನಾ ಬಣ್ಣದ ಕನಸು ಸೀರಿಯಲ್ಲೂ ಬೇಕು, ಸಿನಿಮಾನೂ ಇಷ್ಟ …
ಪ್ರಣೀತಾ ಅವರ ಈ ಟ್ವೀಟ್ಗೆ ಪರ-ವಿರೋಧದ ಚರ್ಚೆಯಾಗುತ್ತಿದೆ. ಪ್ರಣೀತಾ ಯಾವಾಗ ರಾಜಕೀಯ ಸೇರಿದರು ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಪ್ರಣೀತಾ ಮಾತುಗಳನ್ನು ಅನುಮೋದಿಸಿದ್ದಾರೆ.