'ಕೋವಿಡ್​ಗೆ ಕರ್ನಾಟಕದಲ್ಲಿ ಅತೀ ಹೆಚ್ಚು ಜನ ಬಲಿಯಾಗಿದ್ದರೂ ಸರ್ಕಾರ ಮುಚ್ಚಿಟ್ಟಿದೆ'

coronath death
Published on

ಬೆಂಗಳೂರು: ಕರೊನಾ ಸೋಂಕಿನಿಂದ ರಾಜ್ಯದಲ್ಲಿ ಅತಿ ಹೆಚ್ಚು ಸಾವು-ನೋವು ಸಂಭವಿಸಿದ್ದರೂ, ಸರ್ಕಾರ ಮಾಹಿತಿಗಳನ್ನು ಮುಚ್ಚಿಡುತ್ತಿದೆ ಎಂದು ಶಾಸಕ ಎಚ್​.ಕೆ. ಪಾಟೀಲ್​ ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯದಲ್ಲಿ ಸಾವಿನ ಪ್ರಮಾಣ ದುಪ್ಪಟ್ಟಾಗಿದೆ. ರಾಷ್ಟ್ರೀಯ ಸರಾಸರಿ 42 ಇದ್ದರೆ, ಕರ್ನಾಟಕದಲ್ಲಿ 82 ಇದೆ. ಬೆಂಗಳೂರಿನಲ್ಲಿ ಜುಲೈ ತನಕ 49,136 ಸಾವು ಆಗಿದ್ದರೆ, 2019ರಲ್ಲಿ 37,001 ಸಾವು ದಾಖಲಾಗಿತ್ತು. ಈ ವರ್ಷ ಹೆಚ್ಚುವರಿಯಾಗಿ 12,135 ಸಾವು ವರದಿಯಾಗಿದೆ. ಆದರೂ, ಕರೊನಾದಿಂದ 1,886 ಜನ ಮಾತ್ರವೇ ಬೆಂಗಳೂರಿನಲ್ಲಿ ಸತ್ತಿದ್ದಾರೆಂದು ಸರ್ಕಾರ ಮಾಹಿತಿ ನೀಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು. ಇದನ್ನೂ ಓದಿರಿ ಬಾಲಕನ ಪ್ರಾಣ ತೆಗೆದ ಜೋಕಾಲಿ, ಆನ್​ಲೈನ್​ ಪಾಠ ಕೇಳುತ್ತಲೇ ಪ್ರಾಣಬಿಟ್ಟ!

ಅಂಕಿ-ಅಂಶ ಬಚ್ಚಿಟ್ಟು, ಜನರಿಗೆ ತಪ್ಪು ಮಾಹಿತಿ ನೀಡುವುದರಿಂದ ಪ್ರಯೋಜನವಿಲ್ಲ. ಗಂಭೀರ ಸನ್ನಿವೇಶದಲ್ಲಿ ವಿರೋಧ ಪಕ್ಷಗಳು, ತಜ್ಞರು ಮತ್ತು ವೈದ್ಯರ ತುರ್ತು ಸಭೆ ಕರೆದು ಚರ್ಚಿಸಬೇಕು. ತಕ್ಷಣದ ಕ್ರಮ ಕೈಗೊಳ್ಳಲು ಮತ್ತು ವಸ್ತುಸ್ಥಿತಿ ತಿಳಿಸಲು ಮುಂದಾಗಬೇಕು ಎಂದು ಸರ್ಕಾರಕ್ಕೆ ಎಚ್​.ಕೆ. ಪಾಟೀಲ್​ ಸಲಹೆ ನೀಡಿದರು.

ರಾಜ್ಯದಲ್ಲಿ ಕರೊನಾ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಸರ್ಕಾರ ಈ ವರ್ಷ ಡೆತ್​ ಆಡಿಟ್​ ಮಾಡಿಲ್ಲ. ಸಾವು ಯಾವ ಕಾರಣಕ್ಕೆ ಆಯ್ತು ಎನ್ನುವ ಮಾಹಿತಿ ನೀಡಿಲ್ಲ. ಉಸಿರಾಟ ಸಮಸ್ಯೆಯಿಂದ ಶೇ.8.2- 8.5 ಮೃತಪಟ್ಟಿರುವ ಮಾಹಿತಿ ಇದೆ. ಆದ್ದರಿಂದ ಈ ಸಾವಿನ ಬಗ್ಗೆ ಸಿಎಂ ಯಡಿಯೂರಪ್ಪ ಉತ್ತರಿಸಬೇಕು. ತ್ವರಿತವಾಗಿ ಅಧ್ಯಯನ ವರದಿ ಪಡೆಯಲು ಮುಂದಾಗಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net