

ಬೆಂಗಳೂರು: ರಾಜ್ಯದಲ್ಲಿ ಸೋಮವಾರ ಹೊಸದಾಗಿ 7,051 ಕರೊನಾ ಸೋಂಕಿತರು ಪತ್ತೆಯಾಗಿದ್ದು, ಸೋಂಕಿತರ ಒಟ್ಟು ಸಂಖ್ಯೆ 6,47,712ಕ್ಕೆ ತಲುಪಿದೆ.
ಜತೆಗೆ ಸೋಂಕಿನಿಂದ ಗುಣವಾದವರು ಒಂದೇ ದಿನದಲ್ಲಿ 7,064 ಮಂದಿ ಬಿಡುಗಡೆ ಆಗಿ ಮನೆಗೆ ಮರಳಿದ್ದು, ಇದುವರೆಗೆ ಒಟ್ಟು 5,22,846 ಮಂದಿ ಕರೊನಾ ಸೋಂಕಿನಿಂದ ಗುಣವಾಗಿದ್ದಾರೆ.
ಅದಾಗ್ಯೂ ಸೋಮವಾರ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,15,477 ಇದ್ದು, ಸೋಂಕಿತ 841 ಜನರು ಗಂಭೀರ ಸ್ಥಿತಿಯಲ್ಲಿ ಇರುವುದಿರಂದ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆಯಲ್ಲಿದ್ದಾರೆ.
ಇನ್ನೊಂದೆಡೆ ರಾಜ್ಯದಲ್ಲಿ ಒಂದೇ ದಿನ 84 ಜನರು ಕರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದು, ಇದುವರೆಗೆ ಒಟ್ಟು 9,370 ಮಂದಿ ಕೋವಿಡ್-19ಗೆ ಬಲಿಯಾಗಿದ್ದಾರೆ.