ಕರೊನಾ: 150 ದಿನಗಳಲ್ಲಿ ಅತ್ಯಂತ ಕಡಿಮೆ ಸಕ್ರಿಯ ಪ್ರಕರಣಗಳು

Corona
Published on

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 36,571 ಹೊಸ ಕರೊನಾ ಪ್ರಕರಣಗಳು ವರದಿಯಾಗಿದ್ದು, ಈವರೆಗಿನ ಒಟ್ಟು ಸೋಂಕಿತರ ಸಂಖ್ಯೆ 3,23,58,829ಕ್ಕೆ ಏರಿದೆ. ನಿನ್ನೆಯ ದಿನ ಕಳೆದ 150 ದಿನಗಳಿಗೆ ಹೋಲಿಸಿದರೆ, ಅತಿ ಕಡಿಮೆ ಆ್ಯಕ್ಟೀವ್ ಪ್ರಕರಣಗಳು (3,63,605 ಪ್ರಕರಣಗಳು) ಕಂಡುಬಂದಿವೆ ಎನ್ನಲಾಗಿದೆ.

ಕಳೆದ 24 ಗಂಟೆಗಳಲ್ಲಿ 540 ಜನರು ಕರೊನಾಗೆ ಬಲಿಯಾಗಿದ್ದು, ಈವರೆಗಿನ ಕರೊನಾ ಸಾವುಗಳ ಸಂಖ್ಯೆ 4,33,589ಕ್ಕೆ ಏರಿದೆ. ಆದಾಗ್ಯೂ ದೇಶದಲ್ಲಿ ಕರೊನಾ ಚೇತರಿಕೆ ದರವು ಶೇಕಡ 97.54 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net