More

    ಕರೊನಾ ಲಸಿಕೆಯ 2ನೇ ಡೋಸ್​ ಮಿಸ್​ ಮಾಡಿಕೊಂಡವರು ಎಷ್ಟು ಜನ ಗೊತ್ತಾ?!

    ನವದೆಹಲಿ : ಕರೊನಾ ಲಸಿಕೆಯ ಎರಡೂ ಡೋಸ್​ಗಳನ್ನು ತೆಗೆದುಕೊಂಡರೇ ಕರೊನಾ ಸೋಂಕಿನ ವಿರುದ್ಧದ ಸುರಕ್ಷೆಯು ಪರಿಪೂರ್ಣವಾಗುವುದು ಎಂದು ಸರ್ಕಾರ ಹೇಳುತ್ತಾ ಬಂದಿದೆ. ಆದರೆ, ಸುಮಾರು 3.86 ಕೋಟಿ ಭಾರತೀಯರು ಈವರೆಗೆ ಲಸಿಕೆಯ ಎರಡನೇ ಡೋಸ್​ಅನ್ನು ನಿಗದಿತ ಸಮಯದಲ್ಲಿ ತೆಗೆದುಕೊಂಡಿಲ್ಲ ಎಂಬುದು ಬೆಳಕಿಗೆ ಬಂದಿದೆ.

    ಸಾಮಾಜಿಕ ಕಾರ್ಯಕರ್ತ ರಮಣ್ ಶರ್ಮ ಎಂಬುವರ ಆರ್​ಟಿಐ ಪ್ರಶ್ನೆಗೆ ಉತ್ತರವಾಗಿ ಕೇಂದ್ರ ಆರೋಗ್ಯ ಸಚಿವಾಲಯದ ಕೋವಿಡ್​-19 ಲಸಿಕೆ ನೀಡಿಕೆ ವಿಭಾಗವು ಈ ಮಾಹಿತಿ ನೀಡಿದೆ. ಕೋವಿನ್​ ಪೋರ್ಟಲ್​ನ ಮಾಹಿತಿಯ ಅನುಸಾರವಾಗಿ, ಕೋವಿಶೀಲ್ಡ್​ ಮತ್ತು ಕೋವಾಕ್ಸಿನ್​ನ ಮೊದಲನೇ ಡೋಸ್​ ಪಡೆದು, ಎರಡನೇ ಡೋಸ್​ ತೆಗೆದುಕೊಳ್ಳದೆ ಇರುವವರ ವಿವರವನ್ನು ಸರ್ಕಾರ ನೀಡಿದೆ.

    ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡರೂ ಆಂಬುಲೆನ್ಸ್​ನಲ್ಲಿ ಬಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳು!

    ಕೋವಿಶೀಲ್ಡ್​ ಲಸಿಕೆ ಪಡೆದವರು ಮೊದಲನೇ ಡೋಸ್​ ಪಡೆದ 84 ರಿಂದ 112 ದಿನಗಳೊಳಗೆ ಎರಡನೇ ಡೋಸ್​ ಲಸಿಕೆ ಪಡೆಯಬೇಕು. ಕೋವಾಕ್ಸಿನ್​ ಲಸಿಕೆ ಪಡೆದವರು ಮೊದಲನೇ ಡೋಸ್​ನ ನಂತರ 28 ರಿಂದ 42 ದಿನಗಳೊಳಗೆ ಎರಡನೇ ಡೋಸ್​ ಪಡೆಯಬೇಕು. ಲಸಿಕಾಕರಣದ ಪೂರ್ಣ ಪ್ರಯೋಜನ ಪಡೆಯಲು ಎರಡೂ ಡೋಸ್​ ಲಸಿಕೆಗಳನ್ನು ಪಡೆಯುವುದು ಮುಖ್ಯ ಎಂದು ಸರ್ಕಾರ ತಿಳಿಸಿದೆ.

    “ಕೋವಿನ್​ ಪೋರ್ಟಲ್​ನ ಡ್ಯೂ ರಿಪೋರ್ಟ್​ ಪ್ರಕಾರ ಕೋವಿಶೀಲ್ಡ್​ನ ಮೊದಲ ಡೋಸ್​ ಪಡೆದು ಎರಡನೇ ಡೋಸ್​ಅನ್ನು ನಿಗದಿತ ಸಮಯದಲ್ಲಿ ಪಡೆಯದ ಫಲಾನುಭವಿಗಳ ಸಂಖ್ಯೆಯು ಆಗಸ್ಟ್​ 17 ರಂದು 3,40,72,993 ಆಗಿದೆ. ಕೋವಾಕ್ಸಿನ್​ ಮೊದಲ ಡೋಸ್​ ಪಡೆದು ಎರಡನೇ ಡೋಸ್​ಅನ್ನು ನಿಗದಿತ ಸಮಯದಲ್ಲಿ ಪಡೆಯದ ಫಲಾನುಭವಿಗಳ ಸಂಖ್ಯೆಯು 46,78,406 ಆಗಿದೆ” ಎಂದು ಮಾಹಿತಿ ನೀಡಲಾಗಿದೆ.

    ಇದನ್ನೂ ಓದಿ: ಒಲಿಂಪಿಕ್ಸ್​ ಪದಕ ಗೆದ್ದ ಸಿಂಧುಗೆ ಐಸ್ ​ಕ್ರೀಂ ಕೊಡಿಸಿದ ಪ್ರಧಾನಿ ಮೋದಿ!

    ಲಸಿಕೆ ಫಲಾನುಭವಿಗಳು ನಿಗದಿತ ಸಮಯದಲ್ಲಿ ಎರಡನೇ ಡೋಸ್​ ಪಡೆಯಬೇಕೆಂದು ಶಿಫಾರಸ್ಸು ಮಾಡಲಾಗಿದೆ. ಆದರೆ, ಎರಡನೇ ಡೋಸನ್ನು ನಿಗದಿತ ಸಮಯದಲ್ಲಿ ಪಡೆಯದ ಫಲಾನುಭವಿಗಳು ಮತ್ತೆ ಮೊದಲನೇ ಡೋಸ್​ ಪಡೆಯಬೇಕೆಂದಿಲ್ಲ ಎಂದು ಲಸಿಕೆ ವಿಭಾಗ ತನ್ನ ಪ್ರತಿಕ್ರಿಯೆಯಲ್ಲಿ ಹೇಳಿದೆ. ಕೋವಿನ್​ ವೆಬ್​ಸೈಟ್​ನ ಪ್ರಕಾರ ಭಾರತದಾದ್ಯಂತ ಇಂದು ಸಂಜೆಯವರೆಗೆ 12.65 ಕೋಟಿ ಜನರು ಎರಡೂ ಡೋಸ್​​ ಲಸಿಕೆಗಳನ್ನು ಪಡೆದಿದ್ದಾರೆ. (ಏಜೆನ್ಸೀಸ್)

    ಪೆಲ್ವಿಕ್​ ಅಂಗಗಳನ್ನು ಬಲಪಡಿಸಲು ಸರಳವಾದ ‘ಶಲಭಾಸನ’ ಮಾಡಿ!

    ಆಗಸ್ಟ್​ 24ರವರೆಗೆ ಯುಎಇಗೆ ಈ ಏರ್​​ಲೈನ್ಸ್​ನ ವಿಮಾನಗಳಿಗೆ ಪ್ರವೇಶವಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts