ತಂತ್ರಜ್ಞಾನ ನೆರವಿನಿಂದ ಹೈನುಗಾರಿಕೆಯಲ್ಲಿ ಲಾಭ : ದ.ಕ.ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರೀತ ಸಲಹೆ

udgatane

ವಿಜಯವಾಣಿ ಸುದ್ದಿಜಾಲ ಆರ್ಡಿ

ಹಾಲು ಒಕ್ಕೂಟ ಹೈನುಗಾರರಿಗೆ ಸರ್ಕಾರ ವಿವಿಧ ಸೌಲಭ್ಯ ನೀಡಿ ಪ್ರೋತ್ಸಾಹಿಸುತ್ತಿದೆ. ಹೈನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಹೆಚ್ಚಿನ ಲಾಭ ಗಳಿಸಬಹುದು ಎಂದು ದ.ಕ.ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ ಸುಚರೀತ ಶೆಟ್ಟಿ ಹೇಳಿದರು.

ಆರ್ಡಿ ಸಮೀಪದ ಕೆರ್ಜಾಡಿ ಗುಡ್ಡೆಯಂಗಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡ ಪುಣ್ಯಕೋಟಿ ಉದ್ಘಾಟನೆ ಪ್ರಯುಕ್ತ ಕೆರ್ಜಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಸೋಮವಾರ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕುಂದಾಪುರ ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ ಸಂಘದ ಕಟ್ಟಡ ಉದ್ಘಾಟಿಸಿದರು. ಕೆರ್ಜಾಡಿ ಗುಡ್ಡೆಯಂಗಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ನಾಯಕ್ ಅಧ್ಯಕ್ಷತೆ ವಹಿಸಿದರು. ಪ್ರಮುಖರಾದ ರವಿರಾಜ ಹೆಗ್ಡೆ ಕೊಡವೂರು, ಎಸ್.ಪ್ರಕಾಶ್ಚಂದ್ರ ಶೆಟ್ಟಿ, ನರಸಿಂಹ ನಾಯಕ್ ಸಾಣೂರು, ಎಂ.ಸುಧಾಕರ ಶೆಟ್ಟಿ, ಬೋಳ ಸದಾಶಿವ ಶೆಟ್ಟಿ, ಕಮಲಾಕ್ಷ ಹೆಬ್ಬಾರ್, ಡಾ.ರವಿರಾಜ ಹೆಗ್ಡೆ, ಮಾದವ ಐತಾಳ್, ರಾಘವೇಂದ್ರ ಗೌಡ, ರಾಧಾ, ವಿಘ್ನೇಶ್ ನಾಯಕ್, ಉದಯ ಪೂಜಾರಿ, ಕೆ.ಶೇಖರ ಶೆಟ್ಟಿ, ಶೇಖರ ಶೆಟ್ಟಿ ,ಸತೀಶ್‌ಕುಮಾರ್, ಸಂತೋಷ್, ಸಚ್ಚಿದಾನಂದ, ತಿಮ್ಮಪ್ಪ, ಕುಸುಮಾವತಿ ಶೆಟ್ಟಿ, ರೂಪಾಲತಾ ಶೆಟ್ಟಿ, ಸಾಕಮ್ಮ ವಿ.ಶೆಟ್ಟಿ, ಸಿಬ್ಬಂದಿ ರಾಘವೇಂದ್ರ ಹಾಗೂ ಇತರರು ಉಪಸ್ಥಿತರಿದ್ದರು. ಶ್ರೀಲತಾ ಪ್ರಾರ್ಥಿಸಿದರು. ಕಾರ್ಯದರ್ಶಿ ನಿರುಷಕುಮಾರಿ ವರದಿ ಸಲ್ಲಿಸಿದರು. ಉದಯ ಪೂಜಾರಿ ಸ್ವಾಗತಿಸಿದರು. ವಿಘ್ನೇಶ್ ನಾಯಕ್ ವಂದಿಸಿದರು. ಗಣೇಶ್ ಅರಸಮ್ಮಕಾನು ಕಾರ್ಯಕ್ರಮ ನಿರೂಪಿಸಿದರು.

Share This Article

ಬೆಳಿಗ್ಗೆ ಈ ಹಣ್ಣುಗಳನ್ನು ತಿಂದರೆ ಸಾಕು…ಆರೋಗ್ಯ ಸಮಸ್ಯೆಗಳೆಲ್ಲಾ ದೂರವಾಗುತ್ತವೆ

ಬೆಂಗಳೂರು: ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಮಗೆಲ್ಲರಿಗೂ ತಿಳಿದಿದೆ. ಅದಕ್ಕಾಗಿಯೇ ವೈದ್ಯರು ಕೂಡ ಹಣ್ಣುಗಳನ್ನು…

ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿದರೆ ಏನಾಗುತ್ತೆ ಗೊತ್ತಾ?

ನವದೆಹಲಿ:  ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ಹೇಳಲಾಗುತ್ತದೆ. ಅಲೋವೆರಾವು ಹಲವಾರು…

ಚಹಾ ಕುಡಿಯುವುದರಿಂದ ಹೆಚ್ಚುತ್ತದೆ ಕೊಲೆಸ್ಟ್ರಾಲ್! ದಿನಕ್ಕೆ ಎರಡಕ್ಕಿಂತ ಹೆಚ್ಚು ಬಾರಿ ಟೀ ಕುಡಿಯುವುದು ಒಳ್ಳೆಯದಲ್ಲ…

ಬೆಂಗಳೂರು:    ಬೆಳಿಗ್ಗೆ ಚಹಾದೊಂದಿಗೆ ದಿನ ಪ್ರಾರಂಭಿಸುವ ಅನೇಕ ಜನರಿದ್ದಾರೆ. ಸ್ವಲ್ಪ ತಲೆನೋವು ಬಂದರೂ ಟೈಂ ಪಾಸ್…