ಮೀನುಗಾರರಿಂದ ಸಮುದ್ರಕ್ಕೆ ವಿಶೇಷ ಪೂಜೆ

sea pooja
ಗಂಗೊಳ್ಳಿಯಲ್ಲಿ ಮೀನುಗಾರರು ಬುಧವಾರ ಸಮುದ್ರಪೂಜೆ ನೆರವೇರಿಸಿದರು
Published on

ಗಂಗೊಳ್ಳಿ: ಮತ್ಸೃ ಸಂಪತ್ತು ವೃದ್ಧಿ, ಮೀನುಗಾರರ ಏಳಿಗೆಯ ಸಂಕಲ್ಪದೊಂದಿಗೆ ಗಂಗೊಳ್ಳಿಯಲ್ಲಿ ಮೀನುಗಾರರು ಬುಧವಾರ ಸಮುದ್ರಪೂಜೆ ನೆರವೇರಿಸಿದರು.

ಅರ್ಚಕ ಜಿ. ವಿಟ್ಠಲ್‌ದಾಸ್ ಭಟ್ ಹಾಗೂ ಅಜಿತ್ ಭಟ್ ನೇತೃತ್ವದಲ್ಲಿ ಸಮುದ್ರ ಪೂಜೆಯ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಬಳಿಕ ಪರ್ಸಿನ್ ಬೋಟ್, ತ್ರಿಸೆವೆಂಟಿ ಬೋಟ್ ಹಾಗೂ ಟ್ರಾಲರ್ ಬೋಟ್‌ಗಳ ಸಂಘದ ಸದಸ್ಯರು ಜತೆಗೂಡಿ ಸಮುದ್ರರಾಜನಿಗೆ ಪ್ರಾರ್ಥನೆ ಸಲ್ಲಿಸಿದರು. ಪರ್ಸಿನ್ ಬೋಟುಗಳ ಮೀನುಗಾರರ ಸಂಘ ಅಧ್ಯಕ್ಷ ಪ್ರಭಾಕರ ಕುಂದರ್, ತ್ರಿಸೆವೆಂಟಿ ಬೋಟುಗಳ ಮೀನುಗಾರರ ಸಂಘ ಅಧ್ಯಕ್ಷ ಸೌಪರ್ಣಿಕಾ ಬಸವ ಖಾರ್ವಿ, ಟ್ರಾಲ್‌ಬೋಟ್ ಮೀನುಗಾರರ ಸಂಘ ಅಧ್ಯಕ್ಷ ಗಣೇಶ್ ಖಾರ್ವಿ, ಮೀನುಗಾರರ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net