ಸಹಕಾರಿ ಸಂಘ ರೈತ ಸನ್ಮಾನ

sanmana
ಕೋಟ ಸಹಕಾರಿ ವ್ಯವಸಾಯಕ ಸಂಘ ಕೋಟ ಗಿಳಿಯಾರು ಶಾಖೆಯಲ್ಲಿ ಸ್ವಾತಂತ್ರೃ ದಿನಾಚರಣೆಯಲ್ಲಿ ಸ್ಥಳೀಯ ಪ್ರಗತಿಪರ ಕೃಷಿಕರಾದ ಶೇಷ ಮಯ್ಯ, ಮಂಜುನಾಥ ಹೊಳ್ಳ, ಜಿ.ಭಾಸ್ಕರ ಶೆಟ್ಟಿ, ಶೇಖರ ಪೂಜಾರಿ, ಗೋಪಾಲ ಶೆಟ್ಟಿ, ಕಮಲಾ ದೇವಾಡಿಗ, ನಾಗರತ್ನ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು
Published on

ಕೋಟ: ಕೋಟ ಸಹಕಾರಿ ವ್ಯವಸಾಯಕ ಸಂಘ ಕೋಟ ಗಿಳಿಯಾರು ಶಾಖೆಯಲ್ಲಿ ಸ್ವಾತಂತ್ರೃ ದಿನಾಚರಣೆ ಮತ್ತು ರೈತ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.

ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯಶಿಕ್ಷಕ ಭೋಜು ಶೆಟ್ಟಿ ಧ್ವಜಾರೋಹಣಗೈದರು. ಸಂಘ ನಿಕಟಪೂರ್ವ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ನಿರ್ದೇಶಕರಾದ ಅಚ್ಯುತ ಪೂಜಾರಿ, ರಶ್ಮಿತಾ, ಹೊನ್ನಾರಿ ದೇವಸ್ಥಾನದ ಮೊಕ್ತೇಸರ ಮಹಾಬಲ ಹೇರ್ಳೆ ಮತ್ತು ಮೂಡುಗಿಳಿಯಾರು ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಯೋಗೇಂದ್ರ ಉಪಸ್ಥಿತರಿದ್ದರು.

ಸ್ಥಳೀಯ ಪ್ರಗತಿಪರ ಕೃಷಿಕರಾದ ಶೇಷ ಮಯ್ಯ, ಮಂಜುನಾಥ ಹೊಳ್ಳ, ಜಿ.ಭಾಸ್ಕರ ಶೆಟ್ಟಿ, ಶೇಖರ ಪೂಜಾರಿ, ಗೋಪಾಲ ಶೆಟ್ಟಿ, ಕಮಲಾ ದೇವಾಡಿಗ, ನಾಗರತ್ನ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ನಿರ್ದೇಶಕ ಟಿ.ಮಂಜುನಾಥ ಸ್ವಾಗತಿಸಿ, ನಿರೂಪಿಸಿದರು. ಸಂಘ ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net