ನಾಳೆ ಸಹಕಾರಿ ನೌಕರರ ಸಂಘ ಸಭೆ

Published on

ಕಾಸರಗೋಡು: ಕೇರಳ ಸಹಕಾರಿ ನೌಕರರ ಸಂಘ (ಕೆಸಿಇಯು) ರಾಜ್ಯ ಕೌನ್ಸಿಲ್ ಸಭೆ ಡಿ.14ರಂದು ಚೆರ್ಕಳ ಪಿ.ರಾಘವನ್ ನಗರದಲ್ಲಿ ನಡೆಯಲಿದೆ ಎಂದು ಕೆಸಿಇಯು ರಾಜ್ಯ ಉಪಾಧ್ಯಕ್ಷೆ ಪಿ.ಜಾನಕಿ ತಿಳಿಸಿದ್ದಾರೆ.

ಬೆಳಗ್ಗೆ 9.30ಕ್ಕೆ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಳಮರ ಕರೀಂ ಸಮಾವೇಶ ಉದ್ಘಾಟಿಸುವರು. ಕೆಸಿಇಯು ರಾಜ್ಯಾಧ್ಯಕ್ಷೆ ಪಿ.ಎಂ.ವಹೀದಾ ಅಧ್ಯಕ್ಷತೆ ವಹಿಸುವರು. ಪ್ರಧಾನ ಕಾರ್ಯದರ್ಶಿ ಎನ್.ಕೆ.ರಾಮಚಂದ್ರನ್ ವರದಿ ಮಂಡಿಸುವರು. ಸುದ್ದಿಗೋಷ್ಠೀಯಲ್ಲಿ ಸಂಘಟನಾ ಸಮಿತಿ ಉಪಾಧ್ಯಕ್ಷ ಟಿ.ಎಂ.ಎ.ಕರೀಂ, ಸಂಚಾಲಕ ಕೆ.ವಿ.ವಿಶ್ವನಾಥನ್, ಬಿ.ಮೋಹನನ್, ಕೆ.ವಿ.ರಮೇಶನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net