ನಾರ್ಮಲ್ ಗ್ಲಾಸ್, ಟಿ ಶರ್ಟ್, ಒಂದು ಕೈ ಜೇಬಿನಲ್ಲಿಟ್ಟು ಬೆಳ್ಳಿ ಪದಕಕ್ಕೆ ಮುತ್ತಿಟ್ಟ 51 ವರ್ಷದ ಶೂಟರ್​; ಒಲಿಂಪಿಕ್ಸ್​ನಲ್ಲಿ ಇವರ ಸಾಧನೆ ಏನು ಗೊತ್ತಾ?

Shooter Yusuf

ಪ್ಯಾರಿಸ್​: ಪ್ರೇಮ ನಗರಿ ಪ್ಯಾರಿಸ್​ ಆತಿಥ್ಯದಲ್ಲಿ ನಡೆಯುತ್ತಿರುವ 33ನೇ ಆವೃತ್ತಿಯ ಒಲಿಂಪಿಕ್​ ಕ್ರೀಡಾಕೂಟವು ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಹಲವು ವಿಶೇಷತೆಗಳಿಂದ ಕೂಡಿರುವ ಈ ಬಾರಿಯ ಕ್ರೀಡಾಕೂಟದಲ್ಲಿ ವಯಸ್ಸು ಕೇವಲ ಒಂದು ಅಂಕಿಯಷ್ಟೇ, ಸಾಧನೆಯ ಪಥದಲ್ಲಿ ಸಾಗುವ ಯಾರಿಗೂ ಕೂಡ ವಯಸ್ಸು ಬರುವುದಿಲ್ಲ ಎಂಬುದಕ್ಕೆ ಈ ಕ್ರೀಡಾಪಟು ಜೀವಂತ​ ಸಾಕ್ಷಿಯಾಗಿದ್ದಾರೆ.

ಸಾಧನೆ ಮಾಡುವುದಕ್ಕೆ ವಯಸ್ಸು ಅಡ್ಡಿ ಬರುವುದಿಲ್ಲ ಎಂಬುದಕ್ಕೆ ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಅವರ ಸಾಲಿಗೆ ಟರ್ಕಿಶ್​ನ ಈ ಶೂಟರ್ ಯೂಸುಫ್​ ಡಿಕೆಕ್​ ಸೇರುತ್ತಾರೆ. 51 ವರ್ಷದ ಟರ್ಕಿಶ್ ಶೂಟರ್ ಯೂಸುಫ್ ಡಿಕೆಕ್ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಸಖತ್​ ಡಿಫರೆಂಟ್​ ಆಗಿ ಭಾಗವಹಿಸುವ ಇವರು ಎಲ್ಲರ ಗಮನ ಸೆಳೆದಿದ್ದಾರೆ. ಇದಲ್ಲದೆ 10 ಮೀ. ಏರ್​​ಪಿಸ್ತೂಲ್​​ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.

ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯನಿಗೆ ಕೋಚ್​ ಹುದ್ದೆ ಆಫರ್​ ಮಾಡಿದ ಇಂಗ್ಲೆಂಡ್​; ಮಾಜಿ ನಾಯಕನಿಗೆ ಸಿಕ್ತು ಬಂಪರ್​ ಚಾನ್ಸ್

ಪ್ಯಾರಿಸ್​ನಲ್ಲಿ ಈಗಾಗಲೇ 10 ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಹಲವರು ಚಿನ್ನ ಗೆದ್ದಿದ್ದಾರೆ, ಇನ್ನೂ ಹಲವರು ಬೆಳ್ಳಿ ಗೆದ್ದಿದ್ದಾರೆ, ಕೆಲವರು ಕಂಚು, ಇನ್ನೂ ಕೆಲವರು ಪಟ್ಟ ಪ್ರಯತ್ನಕ್ಕೆ ಗೆಲುವು ಸಿಗದೆ ಬರಿಗೈಯಲ್ಲಿ ವಾಪಸ್ ಬಂದಿದ್ದಾರೆ. ಪದಕ ಗೆದ್ದವರೆಲ್ಲಾ ಸುದ್ದಿಯಾಗಿದ್ದಾರೆ. ಆದ್ರೆ ಈ ಟರ್ಕೀಶ್ ಶೂಟರ್ ಯೂಸುಫ್ ಡಿಕೆಕ್​ ಮಾತ್ರ ಇಂಟರ್​​ನೆಟ್​ನಲ್ಲಿ ಹಲ್​ಚಲ್​ ಎಬ್ಬಿಸಿದ್ದಾರೆ. ಅದಕ್ಕೆ ಕಾರಣ ಅವರ ವಯಸ್ಸು ಮತ್ತು ಅಖಾಡದಲ್ಲಿ ಗುರಿಯಿಟ್ಟು ಆಟವಾಡುವ ರೀತಿ.

ಸಾಮಾನ್ಯವಾಗಿ ನಾವು ನೋಡಿದಂತೆ ಶೂಟಿಂಗ್​ನಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಉತ್ತಮ ನಿಖರತೆಗಾಗಿ ವಿಶೇಷ ಸನ್ ಗ್ಲಾಸ್ ಗಳನ್ನು ಮತ್ತು ಶಬ್ದದ ತಡೆಯಲು ಇಯರ್ ಪ್ರೊಟೆಕ್ಟರ್​ಗಳನ್ನು ಬಳಸುತ್ತಾರೆ. ಆದರೆ, ಯೂಸುಫ್ ಇದ್ಯಾವುದನ್ನು ಬಳಸದೆ ಏರ್ ಪಿಸ್ತೂಲ್ ಹಿಡಿದು ಬಂದು ನೇರ ಬೆಳ್ಳಿ ಪದಕ ಗೆದ್ದು ಬೀಗಿದ್ದಾರೆ. 2008ರಲ್ಲಿ ಮೊದಲ ಒಲಿಂಪಿಕ್ಸ್ ನಲ್ಲಿ ಸ್ಪರ್ಧೆ ಮಾಡಿದ್ದ ಯೂಸುಫ್ ಅವರಿಗೆ ಇದು 5ನೇ ಆವೃತ್ತಿಯಾಗಿದೆ. ಆದರೆ ಇದು ಅವರ ಮೊದಲ ಒಲಿಂಪಿಕ್ಸ್ ಪದಕ ಎಂಬುವುದು ಇಲ್ಲಿ ಗಮನರ್ಹ ವಿಚಾರವಾಗಿದೆ. ವೃತ್ತಿ ಜೀವನದ ಅಂತ್ಯದಲ್ಲಿ ಇಂತಹ ಸಾಧನೆ ಮಾಡಿರುವ ಯುಸೂಫ್​ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

Share This Article

ಹದ್ದಿನ ಕಣ್ಣಿನಂಥ ದೃಷ್ಟಿ ನಿಮ್ಮದಾಗಬೇಕಾ? ಇವು ನಿಮ್ಮ ಆಹಾರದಲ್ಲಿ ಇವೆಯೇ? ಚೆಕ್​ ಮಾಡಿಕೊಳ್ಳಿ

ಬೆಂಗಳೂರು: ಮಾನವನ ಅಂಗಾಂಗಗಳಲ್ಲಿ ಎಲ್ಲವೂ ಮುಖ್ಯವೇ ಆದರೂ ಕಣ್ಣುಗಳು ಪ್ರಮುಖ ಸ್ಥಾನ ಪಡೆದುಕೊಂಡಿವೆ. ಹೀಗಾಗಿಯೇ ಕಣ್ಣುಗಳು…

ಇವುಗಳನ್ನು ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದ್ರೆ ಸಾಕು! ಚೆನ್ನಾಗಿ ನಿದ್ದೆ ಜತೆ, ಶ್ರೀಮಂತರಾಗೋದು ಪಕ್ಕಾ!

ಬೆಂಗಳೂರು: ತುರ್ತು ಸಂದರ್ಭಗಳಲ್ಲಿ ಹಣ ಅಥವಾ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  ಈಗ ಹೇಳಿರುವ ಸರಳ ಪರಿಹಾರಗಳನ್ನು…

ಮನೆಯಲ್ಲಿ ಗುಲಾಬಿ ಗಿಡ ಬೆಳೆಸುತ್ತಿದ್ದೀರಾ? ಈ ವಾಸ್ತು ನಿಯಮಗಳು ಕಡ್ಡಾಯ!

ಬೆಂಗಳೂರು: ಸಾಮಾನ್ಯವಾಗಿ ನಮ್ಮ ಹಿತ್ತಲಿನಲ್ಲಿ ಹಲವು ಬಗೆಯ ಗಿಡಗಳನ್ನು ಬೆಳೆಸುತ್ತೇವೆ. ಗುಲಾಬಿ ಗಿಡಗಳನ್ನು ಇಷ್ಟಪಡದವರೇ ಇಲ್ಲ.…