ಕೌಶಲದಿಂದ ಸಮಾಜಕ್ಕೆ ಕೊಡುಗೆ :ಜೈಸನ್ ಸೈಮನ್ ಒಐಸಿ ಆಶಯ

Kkd_Skill
Published on

ನೆಲ್ಯಾಡಿ: ಅನುಭವಿ ಶಿಕ್ಷಕರಿಂದ ಸಾಧ್ಯವಾದಷ್ಟು ಕೌಶಲ ಪಡೆದು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವವರಾಗಿ ಎಂದು ಬೆಥನಿ ವಿದ್ಯಾಸಂಸ್ಥೆಯ ನಿರ್ದೇಶಕ ಜೈಸನ್ ಸೈಮನ್ ಒಐಸಿ ಶುಭ ಹಾರೈಸಿದರು.

ನೆಲ್ಯಾಡಿಯ ಬೆಥನಿ ಐಟಿಐಯಲ್ಲಿ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ಒಂದು ಅಥವಾ ಎರಡು ವರ್ಷಗಳ ತರಬೇತಿ ಪೂರ್ಣಗೊಳಿಸಿದ ನಂತರ ಸಂಸ್ಥೆ ಬಿಟ್ಟು ಹೋಗುವಾಗ ಈ ಸಂಸ್ಥೆಯಲ್ಲಿ ನೀವು ಕಲಿತಿದ್ದೀರಿ ಎನ್ನುವ ಕುರಿತು ಒಂದು ಧನಾತ್ಮಕ ಕುರುಹು ಬಿಟ್ಟು ಹೋಗಬೇಕು. ಆ ಮೂಲಕ ಮುಂಬರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಬೇಕು ಎಂದರು.

ಹಳೇ ವಿದ್ಯಾರ್ಥಿಗಳು ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಸಂಸ್ಥೆಯ ಪ್ರಾಂಶುಪಾಲ ಸಜಿ ಕೆ.ತೋಮಸ್, ತರಬೇತಿ ಅಧಿಕಾರಿ ಜಾನ್ ಪಿ.ಎಸ್, ನೂತನ ಸಿಬ್ಬಂದಿ ವರ್ಗದ ಕಾರ್ಯದರ್ಶಿ ಹರಿಪ್ರಸಾದ್ ರೈ ಉಪಸ್ಥಿತರಿದ್ದರು. ಕಿರಿಯ ತರಬೇತಿ ಅಧಿಕಾರಿ ಸಂತೋಷ್ ಪಿಂಟೋ ಸ್ವಾಗತಿಸಿದರು. ಜೇಮ್ಸ್ ಕೆ.ಎ. ವಂದಿಸಿದರು. ಸುಬ್ರಾಯ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net