More

    ಕುಡಿದ ಮತ್ತಿನಲ್ಲಿ ಗಲಾಟೆ: ಹೆಲ್ಮೆಟ್​ನಿಂದ ಹೊಡೆದು ಕಂಟ್ರಾಕ್ಟರ್ ಕೊಲೆ

    ಬೆಂಗಳೂರು: ಕುಡಿದ ಮತ್ತಿನಲ್ಲಿ ಎರಡು ಗುಂಪುಗಳ ನಡುವೆ ಉಂಟಾದ ಗಲಾಟೆಯಲ್ಲಿ ಸಿವಿಲ್ ಕಂಟ್ರಾಕ್ಟರ್ ಒಬ್ಬರ ತಲೆಗೆ ಹೆಲ್ಮೆಟ್​ನಿಂದ ಹೊಡೆದು ಕೊಲೆ ಮಾಡಿರುವ ಪ್ರಸಂಗ ನಡೆದಿದೆ. ಬೆಂಗಳೂರಿನ ಬಸವೇಶ್ವರನಗರ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಈ ಅಪರಾಧ ನಡೆದಿದ್ದು, 49 ವರ್ಷ ವಯಸ್ಸಾಗಿದ್ದ ಬಾಲಾಜಿ ಎಂಬುವರು ಮೃತಪಟ್ಟಿದ್ದಾರೆ.

    ಆರೋಪಿಗಳು ಮತ್ತು ಕೊಲೆಯಾದ ವ್ಯಕ್ತಿ ಮಾಗಡಿ ರಸ್ತೆ ಠಾಣಾ ವ್ಯಾಪ್ತಿಯ ಬಾರ್ ಒಂದರಲ್ಲಿ ಮದ್ಯಪಾನ ಮಾಡಿದ್ದರು. ಬಾರಿನಿಂದ ಆಚೆ ಬರುವಾಗ ‘ಯಾಕೋ ಗುರಾಯಿಸ್ತಿಯಾ’ ಎಂದು ಹೇಳಿ ಗಲಾಟೆ ತೆಗೆದಿದ್ದರು. ಸ್ಥಳದಲ್ಲಿ ಇದ್ದವರೆಲ್ಲ ಸೇರ್ಕೊಂಡು ಗಲಾಟೆ ಬಿಡಿಸಿ ಕಳುಹಿಸಿದ್ದರು. ಬಳಿಕ ಎರಡೂ ಗುಂಪು ಅಲ್ಲಿಂದ ಹೊರಟಿತ್ತು. ಆದರೆ ಮಳೆ ಬಂದ ಕಾರಣಕ್ಕೆ ಬಾಲಾಜಿ ಮತ್ತು ಸ್ನೇಹಿತರು ಮಾರ್ಗ ಮಧ್ಯೆ ನಿಂತಿದ್ದರು. ಇದೇ ವೇಳೆ ಮತ್ತೆ ಅಲ್ಲಿಗೆ ಬಂದ ಆರೋಪಿಗಳು ಜಗಳ ಆರಂಭಿಸಿದರು. ಆಗ ಓರ್ವ ಹೆಲ್ಮೆಟ್​​ನಿಂದ ಬಾಲಾಜಿ ತಲೆಗೆ ಹೊಡೆದು ಕೊಲೆ ಮಾಡಿದ ಎನ್ನಲಾಗಿದೆ.

    ಇದನ್ನೂ ಓದಿ: ರೈಲಿನಲ್ಲಿ ಬನಿಯನ್​, ಅಂಡರ್​ವೇರ್​ನಲ್ಲಿ ಓಡಾಡಿದ ಶಾಸಕ!

    ಬಸವೇಶ್ವರ ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಬಾರ್ ಬಳಿ ಗಲಾಟೆಯಾಗಿದ್ದ ವೇಳೆ ಆರೋಪಿಗಳ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎನ್ನಲಾಗಿದೆ.

    ಶೂಟಿಂಗ್​ನಲ್ಲಿ ಮತ್ತೊಂದು ಪದಕ ಗೆದ್ದ ಅವನಿ ಲೇಖಾರ!

    8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಡ್ರಗ್​​ಪೆಡ್ಲರ್ ಬೆಂಗಳೂರು ಪೊಲೀಸ್ ವಶಕ್ಕೆ

    VIDEO| ನೀರಿನ ಮೇಲೆ ಈಜುವ ಸಮುದ್ರ ಹಾವು ನೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts