ನಿರಂತರ ಪ್ರಯತ್ನವೇ ಯಶಸ್ಸಿನ ಮೆಟ್ಟಿಲು

inaguration
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಯಾವುದೇ ಕೆಲಸ ಇರಲಿ ಅದರಲ್ಲಿ ಸತತ ಆಸಕ್ತಿ, ಅಭ್ಯಾಸ ಇದ್ದಾಗ ಗುರಿ ತಲುಪಲು ಸಾಧ್ಯ. ಜೀವನದಲ್ಲಿ ಸೋತು ಗೆದ್ದವರ ಕಥೆ ತಿಳಿದುಕೊಂಡು ಮುನ್ನುಗ್ಗಿದಾಗ ಯಾವುದೇ ಸವಾಲು ಮೆಟ್ಟಿ ನಿಲ್ಲುವ ಧೈರ್ಯ ನಮ್ಮಗಾಗುತ್ತದೆ ಎಂದು ರಾಜ್ಯ ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕೃತ ಬಲ್ಲಾಡಿ ಚಂದ್ರಶೇಖರ ಭಟ್ ಹೇಳಿದರು.

ವರಂಗ ಬೈದಶ್ರೀ ಕ್ರಿಕೆಟರ್ಸ್ ವತಿಯಿಂದ ಮೂಡುಬೆಟ್ಟು ಮೈದಾನದಲ್ಲಿ ನಡೆದ 40 ಗಜಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ, ಸಂಘಟನೆ ವತಿಯಿಂದ ನಡೆಸಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸಮಾಜಮುಖಿ ಚಟುವಟಿಕೆ ನಿರತ ಸಂಘಟನೆಗೆ ಎಲ್ಲರ ಸಹಕಾರ ದೊರಕುತ್ತದೆ. ಬೈದಶ್ರೀ ಸಂಘಟನೆ ಇನ್ನಷ್ಟು ಸಮಾಜಮುಖಿ ಕಾರ್ಯ ಮಾಡುತ್ತಾ ಯಶಸ್ಸು ಪಡೆಯಲಿ ಎಂದರು.

ರಾಜ್ಯ ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕೃತ ಮುದ್ರಾಡಿ ಎಂ.ಎನ್.ಡಿ.ಎಸ್.ಎಂ. ಪ್ರೌಢಶಾಲೆ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್, ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತ ವಿ.ಆರ್.ಸತೀಶ್ ಆಚಾರ್ಯ, ಕಿತ್ತೂರು ರಾಣಿ ಚೆನ್ನಮ್ಮ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಆರಾಧ್ಯ, ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಮಟ್ಟದಲ್ಲಿ 9ನೇ ಸ್ಥಾನ ಪಡೆದ ಅನುಷಾ ನಾಯಕ್ ಅವರನ್ನು ಸನ್ಮಾನಿಸಲಾಯಿತು.

ವರಂಗ ಕೆಲ್ಟೆಕ್‌ನ ಅಸಿಸ್ಟೆಂಟ್ ಮ್ಯಾನೇಜರ್ ಸುದೀಪ್ ದೇವಾಡಿಗ, ಶಿವಪುರ ಮುಳ್ಳುಗುಡ್ಡೆ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಪುನೀತ್, ಕಾರ್ಕಳ ಲ್ಯಾಂಪ್ ಸೊಸೈಟಿ ಅಧ್ಯಕ್ಷ ರಾಘವ ನಾಯ್ಕ, ವರಂಗ ಗ್ರಾಪಂ ಸದಸ್ಯ ಪ್ರಕಾಶ್ ದೇವಾಡಿಗ, ವರಂಗ ಸಿ.ಎ. ಬ್ಯಾಂಕ್ ಅಧ್ಯಕ್ಷ ಲಕ್ಷ್ಮಣ ಆಚಾರ್ಯ, ಕೆ.ಇ.ಎಲ್. ಯೂನಿಯನ್ ಅಧ್ಯಕ್ಷ ಆನಂದ ಪೂಜಾರಿ, ಬೈದಶ್ರೀ ಕ್ರಿಕೆಟ್ ಸಂಘಟನೆ ಅಧ್ಯಕ್ಷ ಅರ್ಬಿ ಸುಂದರ ಪೂಜಾರಿ, ಗೌರವಾಧ್ಯಕ್ಷ ಸುಧಾಕರ್ ಪೂಜಾರಿ, ಹಿರಿಯರಾದ ಶಂಕರ ಶೆಟ್ಟಿ ವರಂಗ ಉಪಸ್ಥಿತರಿದ್ದರು.

ವಿ.ಸುರೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಬೈದಶ್ರೀ ಸಂಘಟನೆ ಪ್ರಧಾನ ಕಾರ್ಯದರ್ಶಿ ಶೋಧನ್ ಶೆಟ್ಟಿ ಬಲ್ಲಾಡಿ ವಂದಿಸಿದರು. ಸಂಘಟನೆ ಪದಾಧಿಕಾರಿಗಳು ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net