'ಹೆಂಡತಿ ನನ್ನ ಎದೆಯ ಮೇಲೆ ಕೂತು ರಕ್ತ ಕುಡಿತಾಳೆ' ಎಂದು ಇಲಾಖೆಗೆ ಪತ್ರ ಬರೆದ Constable ; ಇತನ ವರ್ತನೆಗೆ ಮೇಲಾಧಿಕಾರಿಗಳು ದಂಗು!​

dk-2025-03-05t160559727-67c8291d029cf
Published on

Constable: ಉತ್ತರ ಪ್ರದೇಶದ ಅರೆಸೇನಾಪಡೆ ಪ್ರಾದೇಶಿಕ ಸಶಸ್ತ್ರ ಕಾನ್​ ಸ್ಟೇಬಲ್​ ತಮ್ಮ ಮೇಲಾಧಿಕಾರಿ ಕೇಳಿದ ನೋಟಿಸ್​ಗೆ ವಿಚಿತ್ರವಾದ ಉತ್ತರವನ್ನು ಕೊಟ್ಟಿದ್ದಾರೆ. ಅಲ್ಲದೆ, ಈ ಉತ್ತರ ನೋಡಿದ ಹಿರಿಯಅಧಿಕಾರಿಗಳು ದಂಗಾಗಿದ್ದು, ಇತ ಬರೆದ ಪತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಭಾರೀ​ ಆಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಾಂತರ ಜನರು ಹಂಚಿಕೊಂಡಿರುವ ಈ ಪತ್ರವನ್ನು 44 ನೇ ಬೆಟಾಲಿಯನ್ ಪ್ರಾದೇಶಿಕ ಸಶಸ್ತ್ರ ಕಾನ್‌ಸ್ಟೇಬಲ್​ (PAC) ಕಮಾಂಡರ್‌ಗೆ ಬರೆಯಲಾಗಿದೆ. PAC ಸೈನಿಕನಿಗೆ ತನ್ನ ಕೆಲಸದಲ್ಲಿ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಉತ್ತರ ಕೇಳುವ ನೋಟಿಸ್ ನೀಡಲಾಗಿದೆ.

ಫೆಬ್ರವರಿ 17, 2025 ರಂದು ದಿನಾಂಕ ನಿಗದಿಯಾಗಿದ್ದ ಈ ನೋಟಿಸ್, PAC 44 ನೇ ಬೆಟಾಲಿಯನ್ ಜಿ-ಸ್ಕ್ವಾಡ್ ಕಮಾಂಡರ್ ಮಧು ಸುಧನ್ ಶರ್ಮಾ ಅವರು ಕರ್ತವ್ಯದಲ್ಲಿ ದುರ್ವರ್ತನೆ ತೋರಿದ್ದಕ್ಕಾಗಿ ಶಿಸ್ತಿನ ಎಚ್ಚರಿಕೆಯನ್ನು ನೀಡಿದ್ದರು.

ಕಾನ್‌ಸ್ಟೇಬಲ್​ ಕೊಟ್ಟ ಉತ್ತರವೇನು..?

''ಮನೆಯಲ್ಲಿ ಹೆಂಡತಿ ಜತೆ ದಿನಾ ಜಗಳವಾಗುತ್ತದೆ. ಅವಳು ರಾತ್ರಿ ಕನಸಲ್ಲಿ ಬಂದು ನನ್ನ ಎದೆಯ ಮೇಲೆ ಕೂತು ರಕ್ತ ಕುಡಿಯಲು ಪ್ರಯತ್ನಿಸುತ್ತಾಳೆ'' ಹೀಗಾಗಿ, ಕರ್ತವ್ಯಕ್ಕೆ ಸರಿಯಾದ ಸಮಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಇಲಾಖೆ ಕೇಳಿರುವ ನೋಟಿಸ್​ಗೆ ಈಗೆ ವಿಚಿತ್ರವಾಗಿ ಉತ್ತರ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

44 ನೇ ಬೆಟಾಲಿಯನ್ ಹಿರಿಯ ಅಧಿಕಾರಿಯೊಬ್ಬರು ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ್ದು, ಈ ಪತ್ರದ ಕುರಿತು ತಿನಿಖೆ ನಡೆಸಲಾಗುತ್ತಿದೆ. ಈ ಸಿಬ್ಬಂದಿ ಯಾರು?, ಅತನ ಸಮಸ್ಯೆಗಳೇನು..? ಎಲ್ಲದ ಸಂಪೂರ್ಣ ತನಿಖೆ ಮಾಡಲಾಗುತ್ತದೆ. ಅಲ್ಲದೆ, ಅತನಿಗೆ ಸಮಸ್ಯೆ ಇದ್ದರೆ ತಜ್ಞರ ಬಳಿ ಸಮಲೋಚನೆಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net